ಬಣಕಲ್ ಶ್ರಮ ಜೀವಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ವತಿಯಿಂದ ಕ್ರಿಕೆಟ್ ಪಂದ್ಯಾವಳಿ :ಬ್ಯಾಟ್‌ ಹಿಡಿದು ಮೈದಾನಕ್ಕಿಳಿದ ಆಟೋ ಚಾಲಕರು

ಬಣಕಲ್ :ಖಾಕಿ ತೊಟ್ಟು ಆಟೋ ಓಡಿಸುತ್ತಿದ್ದ ಚಾಲಕರು ಬ್ಯಾಟ್‌ ಹಿಡಿದು ಮೈದಾನಕ್ಕಿಳಿದು. ಸಿಕ್ಸರ್‌, ಫೋರ್‌ ಅಂತಾ ತಮ್ಮ ಸಹೋದ್ಯೋಗಿಗಳನ್ನು ಬೆಂಬಲಿಸುತ್ತಿದ್ದ ದೃಶ್ಯ ಬಣಕಲ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ಕಂಡು ಬಂತು. ಸದಾ ಆಟೋ, ಬಾಡಿಗೆ ಎಂದು ಬ್ಯುಸಿ ಇರ್ತಿದ್ದ ಆಟೋ ಚಾಲಕರು ಸಖತ್‌ ಆಗಿ ಎಂಜಾಯ್‌ ಮಾಡುತ್ತ ಕ್ರಿಕೆಟ್‌ ಆಡುತ್ತ ತಮ್ಮ ದೈನಂದಿನ ಕೆಲಸದ ನಡುವೆಯೂ ಸಂತೋಷದ ಕ್ಷಣಕ್ಕೆ ಸಾಕ್ಷಿಯಾದರು.
ಭಾನುವಾರದಂದು ಬಣಕಲ್ ಶ್ರಮಜೀವಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ನಡೆದ 2ನೇ ವರ್ಷದ ಶ್ರಮಜೀವಿ ಕಪ್ ಸೀಸನ್–02 ಕ್ರಿಕೆಟ್ ಪಂದ್ಯ ನಡೆದಿತ್ತು.

ಬೆಳಗ್ಗೆ 10ಗಂಟೆಗೆ ಕ್ರಿಕೆಟ್ ಪಂದ್ಯ ಪ್ರಾರಂಭಗೊಂಡು ಸಂಜೆ 6ರವರೆಗೆ ನಡೆದಿತ್ತು. ಇದರಲ್ಲಿ ಶ್ರಮಜೀವಿ ಅರೇಂಜ್
ವಾರಿಯರ್ಸ್ ತಂಡ ಪ್ರಥಮ ಬಹುಮಾನ ಪಡೆದುಕೊಂಡರೆ
ಶ್ರಮಜೀವಿ ರೆಡ್ ರಾಕಾರ್ಸ್ ದ್ವಿತೀಯ ಬಹುಮಾನ ಹಾಗೂ
ಶ್ರಮಜೀವಿ ಪಿಂಕ್ ಕಿಂಗ್ಸ್ ತೃತೀಯ ಸ್ಥಾನ ಪಡೆದುಕೊಂಡರು

ವರದಿ :✍️ಸೂರಿ ಬಣಕಲ್