2025 – 2026 ನೇ ಸಾಲಿನ ಮೂಡಿಗೆರೆ ತಾಲೂಕು ಮಟ್ಟದ ಕ್ರೀಡಾಕೂಟವು ಹಿರಿಯ ಪ್ರಾಥಮಿಕ ಶಾಲೆ ಬಿಳುಗೋಳ ಆಯೋಜಕತ್ವದಲ್ಲಿ ನಡೆದಿದ್ದು ಈ ಕ್ರೀಡಾಕೂಟದಲ್ಲಿ ಬಣಕಲ್ ಪ್ರೌಢಶಾಲೆಯ 14 ವರ್ಷ ವಯೋಮಾನದ ಬಾಲಕರ ವಿಭಾಗದಿಂದ ಕಾರ್ತಿಕ್ ಕ್ರಮವಾಗಿ ಎತ್ತರ ಜಿಗಿತ ಪ್ರಥಮ ಸ್ಥಾನ ಹಾಗು ಉದ್ದ ಜಿಗಿತ ದ್ವಿತೀಯ ಸ್ಥಾನ ಹಾಗೂ 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಬಾಲಕಿಯರ ವಿಭಾಗದಿಂದ ಕೃತಿ 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ ಹಾಗೂ ವರ್ಷಿಣಿ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾ ಹಂತಕ್ಕೆ ಆಯ್ಕೆಯಾಗಿರುತ್ತಾಳೆ….
ಬಾಲಕಿಯರು ರಿಲೇ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ…
2025- 2026 ನೇ ಸಾಲಿನ ತಾಲೂಕು ಮಟ್ಟದ 17 ರ ವಯೋಮಾನದ ( under 17) ಕ್ರೀಡಾಕೂಟವು ಅತಿಥಿಯ ಶಾಲೆ ಕೊಟ್ಟಿಗೆಹಾರ ಪ್ರೌಢಶಾಲೆ, ನೇತೃತ್ವದಲ್ಲಿ ನಡೆಸಲಾಯಿತು … ಬಾಲಕಿಯರ ವಿಭಾಗದಿಂದ ವಾಲಿಬಾಲ್ ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಹಾಗೂ ಬಾಲಕರ ವಿಭಾಗದಿಂದ ವಾಲಿಬಾಲ್ ಹಾಗೂ ಖೋ ಖೋ ದ್ವಿತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾರೆ
17 ರ ವಯೋಮಾನದ ಐದು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗಿರುತ್ತಾರೆ ಹಾಗೂ ಮೂರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಖೋ ಖೋ ತಂಡಕ್ಕೆ ಆಯ್ಕೆಯಾಗಿರುತ್ತಾರೆ.
ಮಕ್ಕಳ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕರು ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೂ ತಂಡದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ ಶಿಕ್ಷಕರಾದ ಎ ಎನ್ ಪ್ರತೀಕ್ ಹಾಗೂ ಶಿಕ್ಷಕಿಯರಾದ ವಲ್ಸಮ್ಮ ದಿವ್ಯ ಜ್ಯೋತಿ ಹಾಗೂ ಈ ಕ್ರೀಡಾಕೂಟದಲ್ಲಿ ಸಹಕರಿಸಿದ ಎಲ್ಲಾ ಶಿಕ್ಷಕವೃಂದದವರಿಗೂ ಹೃತ್ಪೂರ್ವಕವಾದ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ