ಅರಕಲಗೂಡು ಓಪನ್ ನ್ಯಾಷನಲ್ ಕರಾಟೆ ಚಾಂಪಿಯನ್ಶಿಪ್ : ಬಣಕಲ್ ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ಸಾಧನೆ
ಅರಕಲಗೂಡುನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಬಣಕಲ್ ರಿವರ್ ವ್ಯೂ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವು ವಿಭಾಗಗಳಲ್ಲಿ ಬಹುಮಾನಗಳನ್ನು ಗೆದ್ದು ಶಾಲೆಗೆ ಕೀರ್ತಿ ತಂದಿದ್ದಾರೆ. ಈ ಸ್ಪರ್ಧೆಯನ್ನು ಒಕಿನಾವಾ ಕರಾಟೆ-ಡೋ ಶೊರಿನ್ ರ್ಯೂ ಶೊರಿನ್ ಕಾಯ್, ಜಪಾನ್ ಇವರ ವತಿಯಿಂದ 2025ರ ಸೆಪ್ಟೆಂಬರ್ 6ರಂದು ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಆಯೋಜಿಸಲಾಗಿತ್ತು.
ರಿವರ್ ವ್ಯೂ ಶಾಲೆಯ ವಿಜೇತ ವಿದ್ಯಾರ್ಥಿಗಳು:
- ಅದ್ವೈತ್ (4ನೇ ತರಗತಿ) – ಕಟಾ – 1ನೇ ಸ್ಥಾನ
- ಪುನರ್ವಿ ಭಾಗತ್ (5ನೇ ತರಗತಿ) – ಕಟಾ – 2ನೇ ಸ್ಥಾನ
- ಅಮೃತ್ ಕೆ. ಆರ್. (5ನೇ ತರಗತಿ) – ಕಟಾ – 1ನೇ ಸ್ಥಾನ
- ಇಬ್ಬನಿ ಬಿ. ಎಂ. (6ನೇ ತರಗತಿ) – ಕಟಾ – 3ನೇ ಸ್ಥಾನ
- ಧನ್ವಿ ಬಿ. ಎಸ್. (7ನೇ ತರಗತಿ) – ಕಟಾ – 2ನೇ ಸ್ಥಾನ
- ಎ. ಪಿ. ಪ್ರತಿಷ್ಠ (7ನೇ ತರಗತಿ) – ಕಟಾ – 3ನೇ ಸ್ಥಾನ ಮತ್ತು ಕುಮಿತೆ – 3ನೇ ಸ್ಥಾನ
- ಪಾರಿಕ್ಷಿತ್ (7ನೇ ತರಗತಿ) – ಕಟಾ – 1ನೇ ಸ್ಥಾನ ಪುಟ್ಟ ಚಾಂಪಿಯನ್ಗಳಿಗೆ ಶಾಲಾ ಆಡಳಿತ ಮಂಡಳಿ ಅವರ ಪರಿಶ್ರಮ, ಮತ್ತು ಅದ್ಭುತ ಸಾಧನೆಗಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಮಕ್ಕಳ ಮುಂದಿನ ಕರಾಟೆ ಪಯಣದಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಸಿಕ್ಕಿ ಶಾಲೆಗೆ ಕೀರ್ತಿ ತರುವಂತಾಗಲಿ ಎಂದು ಶುಭಕೋರಿದರು.
ಇದೆ ಸಂದರ್ಭದಲ್ಲಿ ಟ್ರೈನರ್ ರೆನ್ಶಿ ನಟರಾಜ್ ಎಚ್. ಜಿ., ಬ್ಲ್ಯಾಕ್ ಬೆಲ್ಟ್ 5ನೇ ಡಾನ್ ಅವರ ಪರಿಣತಿ ಮಾರ್ಗದರ್ಶನಕ್ಕೆ ವಿಶೇಷ ಧನ್ಯವಾದಗಳನ್ನು ಸಲ್ಲಿಸಿದರು.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ