ಮಂಗಳೂರಿನ ಹೆಸರಾಂತ ಚಾನೆಲ್ “ನಮ್ಮ ಟಿ.ವಿ.ಕುಡ್ಲ” ನಡೆಸುವ ಡ್ಯಾನ್ಸ್ ಮಮ್ಮಿ ಡ್ಯಾನ್ಸ್ ಶೊ ಗೆ ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿ ಸುಭಾಷ್ ನಗರ ವಾಸಿ ಪ್ರಶಾಂತ್ ಪೂಜಾರಿ ಅವರ ಪತ್ನಿ ಶ್ರೀಮತಿ ನಿರೀಕ್ಷಾ ಕೋಟ್ಯಾನ್ ಅವರು ಆಯ್ಕೆಯಾಗುವುದರ ಮೂಲಕ ಗಮನ ಸೆಳೆದಿದ್ದಾರೆ.
ಮೂಡಿಗೆರೆಯ “ಹ್ಯಾಪಿ ಫೀಟ್ ಡಾನ್ಸ್ ಸ್ಟುಡಿಯೋ ” ದಲ್ಲಿ ಡ್ಯಾನ್ಸ್ ಮಾಸ್ಟರ್ ನಾಗೇಶ್ ಕೋಟ್ಯಾನ್ ಅವರ ಮಾರ್ಗದರ್ಶನದಲ್ಲಿ ಪರಿಣಿತರಾಗಿ ಜೂಲೈ ತಿಂಗಳ ಆನ್ಲೈನ್ ಆಡಿಶನ್ ಅಲ್ಲಿ ಆಯ್ಕೆಯಾದ ಹದಿನೆಂಟು ಸ್ಪರ್ದಿಗಳಲ್ಲಿ ಇವರು ಒಬ್ಬರಾಗಿದ್ದರು.
ದಿನಾಂಕ 8 ಆಗಸ್ಟ್ 2025 ರಂದು ಮಂಗಳೂರಿನ ಟೌನ್ ಹಾಲ್ನಲ್ಲಿ (ಪುರಭವನ) ನಡೆದ ಎರಡನೆಯ ಸುತ್ತಿನ ಆಯ್ಕೆ ಪ್ರಕ್ರಿಯೆಯಲ್ಲಿ ರಿಮಿಕ್ಸ್ ಹಾಡಿಗೆ ನೃತ್ಯ ಮಾಡಿ ತೀರ್ಪುಗಾರರ ಮನಗೆದ್ದು ಸೆಪ್ಟೆಂಬರ್ 19/2025 ರಂದು ನಡೆಯುವ ಡ್ಯಾನ್ಸ್ ಮಮ್ಮಿ ಡ್ಯಾನ್ಸ್ ನ ಎರಡನೆ ಸುತ್ತಿಗೆ ಆಯ್ಕೆಯಾದ 13 ಸ್ಪರ್ದಿಗಳಲ್ಲಿ ಇವರು ಮೂರನೇ ಸ್ಪರ್ದಿಯಾಗಿ ಹೊರಹೋಮ್ಮಿದ್ದಾರೆ
ಇವರ ಈ ಸಾಧನೆಗೆ ತರಬೇತುದಾರ ನಾಗೇಶ್ ಕೋಟ್ಯಾನ್ ಮತ್ತು ಕುಟುಂಬದ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ
ಆರ್ಥಿಕವಾಗಿ ಹಿಂದುಳಿದ ಬಡಕುಟುಂಬದ ಈ ಸ್ಪರ್ದಿಗೆ ಮುಂದಿನ ಹಂತ ತಲುಪಲು ಸಹಹೃದಯಿ ಮಿತ್ರರ ಸಹಾಯ ಅಗತ್ಯವಾಗಿದೆ.