ನಯನ ಮೋಟಮ್ಮರ ತೇಜೋವದೆಗೆ ವಿರೋಧಿಗಳ ಯತ್ನ :ಸಬ್ಳಿ ದೇವರಾಜ್


ಮೊನ್ನೆ ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ನಡೆದ ಮೂಡಿಗೆರೆ ತಾಲ್ಲೂಕು ಗಣೇಶೋತ್ಸವ ಸಮಿತಿ ಲೋಗೋ ಮತ್ತು ಕಾರ್ಯಕ್ರಮದ ಭಗವಾಧ್ವಜ ಸ್ಥoಭ ಸ್ಥಾಪನ ಕಾರ್ಯಕ್ರಮದಲ್ಲಿ ಕೇಸರಿ ಬಣ್ಣದ ಶಾಲು ಧರಿಸಿದ ಕಾರಣ ಮಾನ್ಯ ಮೂಡಿಗೆರೆ ಶಾಸಕರಾದ ಶ್ರೀಮತಿ ನಯನ ಮೋಟಮ್ಮರವರನ್ನು ತೇಜೋವಧೆ ಮಾಡುತ್ತಿರುವುದು ತರವಲ್ಲ, ಒಬ್ಬ ಶಾಸಕರಾಗಿ ಅವರು ತಮ್ಮ ಜವಬ್ದಾರಿಯನ್ನು ನಿಭಾಯಿಸಿದ್ದಾರೆ. ಶಾಸಕರಾದ ಮೇಲೆ ಒಂದು ಜಾತಿಗೆ, ಧರ್ಮಕ್ಕೆ ಹೇಗೆ ಸೀಮಿತರಾಗಲು ಸಾಧ್ಯ? ಯಾವುದೇ ಧರ್ಮದ ಆಚರಣೆಯಲ್ಲಿ ಆ ಧರ್ಮದ ಆಚರಣೆಯಂತೆಯೇ ಭಾಗವಹಿಸಬೇಕು ಅದು ಆ ಧರ್ಮಕ್ಕೆ ಕೊಡುವ ಗೌರವ, ಅವರು ಮೊದಲಿನಿಂದಲೂ ದೇವರಮೇಲೆ ಅಪಾರ ಭಕ್ತಿ ಭಾವ ಹೊಂದಿರುವ ವ್ಯಕ್ತಿ ಅದು ಅವರ ವಯಕ್ತಿಕ ವೈಚಾರಿಕೆಗೆ ಬಿಟ್ಟ ವಿಚಾರ ಅದರಿಂದ ಬೇರೆಯವರಿಗೆ ಯಾವ ರೀತಿ ಧಕ್ಕೆಯಾಗಲಿದೆ.


ಒಬ್ಬ ಶಾಸಕ ಹಿಂದೂ ಆಗಿರಲಿ, ಮುಸ್ಲಿಂ ಅಥವಾ ಕ್ರೈಸ್ತ ಅಥವಾ ಇನ್ನಾವುದೇ ಜನಾಂಗದವರಾಗಿರಲಿ ಇತರೆ ಜನಾಂಗದ ಪೂಜೆ ಪುರಸ್ಕಾರ ಹಬ್ಬ ಹರಿದಿನಗಳಿಗೆ ಅವರ ಸಂಪ್ರದಾಯದಂತೆ ಭಾಗವಹಿಸಬೇಕು ಅದು ಅಲ್ಲದೆ ಗಣೇಶ ಚತುರ್ಥಿ ಒಂದು ಹಬ್ಬ ಮಾತ್ರ ಎಲ್ಲಾ ಧರ್ಮ ಜಾತಿ ಮೀರಿ ನೆಡೆಯುವ ಹಬ್ಬ ಎಂದು ಸ್ವಾತಂತ್ರ್ಯ ಹೋರಾಟದಿಂದಲೂ ಗೊತ್ತಿರುವ ವಿಚಾರ ಅದು ಎಲ್ಲರ ಗಮನದಲ್ಲಿರಲಿ .


ಈಗ ಎದ್ದಿರುವ ವಿಚಾರ ಕೇಸರಿ ಶಲ್ಯ (ನೀವುಗಳು ಹೇಗೋ ನನಗೆ ಗೊತ್ತಿಲ್ಲ)ನಾವುಗಳು ಸಹ ನಮ್ಮ ಮನೆಯ, ಊರಿನ ದೇವಸ್ಥಾನದ ಹಬ್ಬಗಳು ನಡೆದಾಗ ಧರಿಸುವುದು ಅದೇ ಕೇಸರಿ ಪಂಚೆ ಶಲ್ಯ ಅದೇನು ಒಂದು ಸಂಘಟನೆಯ ಸ್ವತ್ತೇ?.
ವಿಚಾರವಂತರು ನೀವುಗಳು ಒಬ್ಬ ಶಾಸಕರಿಂದ ಬಯಸಬೇಕಾಗಿದ್ದು ಜನರಿಗೆ ಸ್ಪಂದನೆ,ಸೌಲಭ್ಯ, ಅನ್ಯ ಜಾತಿ,ಧರ್ಮಗಳೊಂದಿಗೆ ಸೌಹಾರ್ದತೆ ಇದೆಯೇ ಅದನ್ನ ಗಮನಿಸಬೇಕೇ ವಿನಃ ಇದನ್ನಲ್ಲ. ಆದಾಗ್ಯೂ ಆ ಕಾರ್ಯಕ್ರಮದಲ್ಲಿ ಯಾವುದಾದರೂ ಧರ್ಮಕ್ಕೆ ಅವಹೇಳನಕಾರಿ ಮಾತುಗಳನ್ನು ಬಾಷಣದಲ್ಲಿ ಆಡಿದ್ದಾರೆಯೇ ಯಾವ ಅಥಿತಿಗಳು ಆಗಿದ್ದಾಗಲು ಅಲ್ಲಿ ಶಾಸಕರು ಕುಳಿತಿದ್ದರೆ ನೀವು ಕೇಳುವುದು ಸರಿ ಯಾವುದು ಇಲ್ಲದೆ ಸುಮ್ಮನೆ ಆಪಾದಿಸಿ ಅವಮಾನಿಸುವುದು ತರವಲ್ಲ ಇನ್ನಾದರೂ ಮೊಸರಲ್ಲಿ ಕಲ್ಲುಡುಕುವುದನ್ನು ಬಿಡಿ ಎಂದು ಮೂಡಿಗೆರೆ ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯ ಸಬ್ಲಿ ದೇವರಾಜು ಮನವಿ ಮಾಡಿದ್ದಾರೆ.