ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಬಳಿಯ ಹೇಮಾವತಿ ನದಿಯಲ್ಲಿ ನೂರಾರು ಮೀನುಗಳು ಮರಣ ಹೊಂದಿವೆ.
ಮೀನುಗಳನ್ನು ಹಿಡಿಯುವುದಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಅಡಕೆ ಬೆಳೆಗೆ ಬಳಸುವ ರಾಸಾಯನಿಕ ಪದಾರ್ಥವಾದ ಮೈಲು ತುತ್ತವನ್ನು ನದಿಯಲ್ಲಿ ಮಿಶ್ರಣ ಮಾಡಿರುವ ಶಂಕೆ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ. ಇದರಿಂದ ಮಲೆನಾಡಿಗರ ಪಾಲಿನ ಜೀವನದಿಯಾಗಿರುವ ಹೇಮಾವತಿ ನದಿಯ ನೀರು ಕಲುಷಿತಗೊಳ್ಳುತ್ತಿದೆ. ಕುಡಿಯಲು ಕೂಡ ಇದೆ ನೀರನ್ನು ಉಪಯೋಗಿಸುವುದರಿಂದ ನಾನಾ ರೀತಿಯ ಕಾಯಿಲೆಗೆ ತುತ್ತಾಗುವ ಸಂಭವ ಇರುತ್ತದೆ.ಹೇಮಾವತಿ ನದಿ ಇಲ್ಲಿನ ಜಾವಳಿಯಲ್ಲಿ ಹುಟ್ಟಿ ಮೂಡಿಗೆರೆ ಮೂಲಕ ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಡ್ಯಾಂಗೆ ನೀರು ಸೇರುತ್ತದೆ.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ