ಪ್ರತಿಬಿಂಬ ಟ್ರಸ್ಟ್ ಬೆಂಗಳೂರು(ರಿ )ವತಿಯಿಂದ ಕೊಟ್ಟಿಗೆಹಾರದ ಪ್ರೌಢಶಾಲೆ ಶಿಕ್ಷಕಿ ನೌಶಿಬ ರವರಿಗೆ “ಅತ್ಯುತ್ತಮ ಶಿಕ್ಷಕಿ” ಪ್ರಶಸ್ತಿ

ಬಣಕಲ್ :ಪ್ರತಿಬಿಂಬ ಟ್ರಸ್ಟ್ (ರಿ )ಬೆಂಗಳೂರು ವತಿಯಿಂದ ನೀಡುವ ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ನೀಡುವ ಅತ್ಯುತ್ತಮ ಶಿಕ್ಷಕ/ಕಿ ಪ್ರಶಸ್ತಿಗೆ 7ಜನ ಶಿಕ್ಷಕ/ಕಿ ಯರನ್ನು ಆಯ್ಕೆ ಮಾಡಿತ್ತು. ಅದರಲ್ಲಿ ಮೂಡಿಗೆರೆ ತಾಲೂಕ್ಕಿನ ಕೊಟ್ಟಿಗೆಹಾರ ಪ್ರೌಢ ಶಾಲೆ ಶಿಕ್ಷಕಿ ಶ್ರೀಮತಿ,ನೌಶಿಬ ಪಿ.ಎಂ ರವರನ್ನು ಆಯ್ಕೆಮಾಡಿದ್ದರು..
ಸರ್ಕಾರಿ ಕನ್ನಡ ಶಾಲೆಗಳ ಸರ್ವತೋಮುಖ ಅಭಿವೃದ್ಧಿ ಕೆಲಸಗಳಲ್ಲಿ ಅವರ ಶ್ರಮ ಹಾಗೂ ಸಮರ್ಪಣಾ ಮನೋಭಾವವನ್ನು ಗುರುತಿಸಿ ಪ್ರತಿಬಿಂಬ ಟ್ರಸ್ಟ್ (ರಿ )ಬೆಂಗಳೂರು ಸಂಸ್ಥೆಯು 2024-25ನೇ ಸಾಲಿನ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಿದೆ.

ವರದಿ ✍️ಸೂರಿ ಬಣಕಲ್