ಬಣಕಲ್ :. ಚಲಿಸುತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಬಣಕಲ್ ಗ್ರಾಮದ ದಾಸರಹಳ್ಳಿ ಬಳಿ ನಡೆದಿದೆ.
ಬಣಕಲ್ ನ ಶಾಂತಿನಗರ ನಿವಾಸಿ ಯಾಗಿರುವ ಸೈಯದ್ ಆಲಿ (ಮೋಣು )ಗಾರೆ ಕೆಲಸಕ್ಕೆಂದು ಬಸನಿ ಸುಧಾಕರ್ ರವರ ಮನೆಗೆ ಗಾರೆ ಕೆಲಸಕ್ಕೆ ಹೋಗಿದ್ದು ಕೆಲಸ ಮುಗಿಸಿಕೊಂಡು ವಾಪಾಸ್ ಮನೆಗೆ ಬರುವಾಗ ಮಂಗಳವಾರ ಸಂಜೆ 5:45ರ ಸಮಯದಲ್ಲಿ ದಾಸರಹಳ್ಳಿ ಸಮೀಪ ಕಾರಿನ ನ ನಿಯಂತ್ರಣ ತಪ್ಪಿ ಬಲ ಮಗ್ಗಲು ಆಗಿ ಮುಗುಚಿ ಬಿದ್ದ ಪರಿಣಾಮ ಸಯ್ಯದ್ ಆಲಿರವರ ತಲೆ ಹಾಗೂ ಮುಖದ ಭಾಗದಲ್ಲಿ ಪೆಟ್ಟು ಬಿದ್ದಿದೆ. ತಕ್ಷಣಕ್ಕೆ ಮೂಡಿಗೆರೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ . ತಪಾಸಣೆ ನಡೆಸಿದ ವೈದ್ಯರು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.
ಅವರ ನಿಧನ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಬಣಕಲ್ ಜನತೆ ಮೋಣು ರವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.ಮೃತರು ತಂದೆ,ತಾಯಿ, ಮಡದಿ ,ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.ಈ ಸಂಬಂಧ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ :✍️ಸೂರಿ ಬಣಕಲ್