ಅಂಡರ್ 14 ಕರ್ನಾಟಕ ಮಿನಿ ಒಲಂಪಿಕ್ ರಾಜ್ಯ ಮಟ್ಟದ ಕಬಡ್ಡಿ ಕ್ರೀಡಾಕೂಟ:ಹಾವೇರಿ ತಂಡದ ಆಟಗಾರ್ತಿಯಾರಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಅಂಕಿತ ಹಾಗೂ ಶರಣ್ಯ

ಮೂಡಿಗೆರೆ ತಾಲೂಕ್ಕಿನ ಬಿ. ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಗೊಡು ಗ್ರಾಮದ ಪ್ರೇಮ ದಿ.ಹರೀಶ್ ಅವರ ಮಗಳಾದ ಅಂಕಿತ ಹಾಗೂ ಹೊಕ್ಕಳ್ಳಿ ಗ್ರಾಮದ ಸಾವಿತ್ರಿ ರವಿ ದಂಪತಿಯರ ಮಗಳಾದ ಶರಣ್ಯ ಬೆಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಮಿನಿ ಒಲಂಪಿಕ್ ಕಬಡ್ಡಿ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಅಂಡರ್ 14 ವಿಭಾಗದಲ್ಲಿ ಹಾವೇರಿ ತಂಡದ ಆಟಗಾರ್ತಿಯರಾಗಿ ಭಾಗವಹಿಸಿ ರಾಜ್ಯ ಮಟ್ಟದಲ್ಲಿ ಆಯ್ಕೆಯಾಗಿ ಚಿನ್ನದ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶರಣ್ಯ ಬಿಳುಗುಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ ಅಂಕಿತ ಮೂಡಿಗೆರೆ ಬಾಲಕಿಯರ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿತ್ತಿದ್ದಾಳೆ.

ವಿದ್ಯಾರ್ಥಿನಿಯರ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತ ಪಡಿಸಿದ್ದಾರೆ.

ವರದಿ ✍️ಸೂರಿ ಬಣಕಲ್