2023-24ನೇ ಸಾಲಿನ ಐ. ಸಿ. ಎಸ್. ಇ ಹತ್ತನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು ನಜರೆತ್ ಶಾಲೆ, ಬಣಕಲ್ ಸತತ 12ನೇ ವರ್ಷ ಕೂಡ ಶೇಕಡ 100 ಫಲಿತಾಂಶ ಪಡೆದಿದೆ.
43 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲಾ 43 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಹಾಗೂ 30 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಬಣಕಲ್ ನ ಲಕ್ಷ್ಮಣ ಮತ್ತು ನಳಿನಾಕ್ಷಿಯವರ ಪುತ್ರಿ ಕುಮಾರಿ ವರ್ಷಿತ. ಎಲ್ ಶೇಕಡಾ 95 ಅಂಕ ಗಳಿಸಿ ಶಾಲೆಗೆ ಪ್ರಥಮ, ಬಂಕೇನಹಳ್ಳಿಯ ಬಿ ಸಿ ಪ್ರತಾಪ್ ಮತ್ತು ರಜನಿಯವರ ಪುತ್ರಿ ಸರಾಯು ಪ್ರತಾಪ್ ಶೇ. 93.20 ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಹಾಗೂ ನೀಲಯ್ಯ ಮತ್ತು ಲಕ್ಷ್ಮಿ ರವರ ಮಗ ನಿಖಿಲ್ ಎನ್ ಪೂಜಾರಿ ಶೇ. 93 ಅಂಕಗಳೊಂದಿಗೆ ಶಾಲೆಗೆ ತೃತೀಯ ಸ್ಥಾನ ಗಳಿಸಿದ್ದಾರೆಂದು ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಹಿಲ್ಡ ಲೋಬೋ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.