ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ: ಮೂಡಿಗೆರೆಯ ನಳಂದ ಕಾಲೇಜಿನ ವಿದ್ಯಾರ್ಥಿನಿ ಫಾಜಿಲಾತ್ ಮಾತಿಶ ತಾಲ್ಲೂಕ್ಕಿಗೆ ಪ್ರಥಮ

ಬಣಕಲ್ :ಮೂಡಿಗೆರೆಯ ನಳಂದ ಕಾಲೇಜಿನ ವಿದ್ಯಾರ್ಥಿನಿ ಫಾಜಿಲಾತ್ ಮಾತಿಶ ವಾಣಿಜ್ಯ ವಿಭಾಗದಲ್ಲಿ ತಾಲೂಕ್ಕಿಗೆ ಪ್ರಥಮ ಸ್ಥಾನ ಪಡೆದಿದ್ದು 600ಕ್ಕೆ586ಅಂಕ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಬಣಕಲ್ ನ ಆಶೀತ್ ಅಲಿಯಾಜ್ ಇಚ್ಚಾ ಇವರ ಇಬ್ಬರು ಸಹೋದರಿಯರ ಮಕ್ಕಳು PUC ವಿಭಾಗದಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ. ಅದರಲ್ಲಿ ಮೊದಲ ಸಹೋದರಿಯಾದ ನಸ್ರಿನ್ ಮತ್ತು ಅಹಮದ್ ದಂಪತಿಯ ಮಗಳಾದ ಫಾಜಿಲಾತ್ ಮಾತಿಶ K.A ಇವಳು ಮೂಡಿಗೆರೆಯ ನಳಂದ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 586 ಪ್ರತಿಶತ 98% ಅಂಕ ಗಳಿಸಿ ಮೂಡಿಗೆರೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾಳೆ. ಅದೇ ರೀತಿ ಆಶೀತ್ ನ ಮತ್ತೊಬ್ಬಳು ಸಹೋದರಿಯಾದ ಯಾಸ್ಮಿನ್ ಮತ್ತು ಅಯೂಬ್ ದಂಪತಿಗಳ ಮಗಳಾದ U. A ಹಾಫಿಯ ಇವಳು ಮೂಡಿಗೆರೆಯ B.G.S ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ 600 ಅಂಕ ಗಳಿಗೆ 549 ಪ್ರತಿಶತ 92% ಅಂಕಗಳನ್ನು ಪಡೆದುಕೊಂಡಿರುತ್ತಾಳೆ.

ವಿದ್ಯಾರ್ಥಿನಿಯರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.