2 Indian tigers

ಬಣಕಲ್ ನ ದಾಸರಹಳ್ಳಿ ಸಮೀಪ ಜೋಡಿ ಹುಲಿ ಪ್ರತ್ಯಕ್ಷ

ಬಣಕಲ್ ನ ದಾಸರಹಳ್ಳಿ ರಸ್ತೆಯಲ್ಲಿ ಜೋಡಿ ಹುಲಿ ರಸ್ತೆ ದಾಟುತಿದ್ದ ದೃಶ್ಯ ಕಂಡು ಬಂದಿದೆ.ಇದು ಸುತ್ತ ಮುತ್ತಲಿನ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ತಾಲೂಕಿನಲ್ಲಿ ವಿವಿಧ ಭಾಗದಲ್ಲಿ ಇದಕ್ಕೂ ಮುಂಚೆ ಚಿರತೆಗಳ ಹೆಜ್ಜೆ ಗುರುತು ಸಾರ್ವಜನಿಕರಿಗೆ ಕಂಡು ಬಂದಿದ್ದವು. ಆದರೇ ಈಗ ಕಾಡು ಬಿಟ್ಟು ಜನನಿಬಿಡ ಪ್ರದೇಶದಲ್ಲಿ ಜೋಡಿ ಹುಲಿ ಪ್ರತ್ಯಕ್ಷವಾಗಿರುವುದು ಆತಂಕ ಮತ್ತಷ್ಟು ಹೆಚ್ಚಿಸಿದೆ.

ಮತ್ತಿಕಟ್ಟೆ ನಿವಾಸಿ ಸುದರ್ಶನ್ ಎಂಬುವವರು ಇಂದು ಎಂದಿನಂತೆ ಬೆಳಗಿನ ಜಾವಾ ಕೆಲಸಕ್ಕೆ ಹೋಗುತ್ತಿದ್ದ ಸಮಯದಲ್ಲಿ ಎರಡು ಬಾರಿ ಗಾತ್ರದ ಜೋಡಿ ಹುಲಿಗಳು ದಾಸರಹಳ್ಳಿಯ ಬಳಿ ರಸ್ತೆ ದಾಟುತ್ತಿದ್ದ ದೃಶ್ಯ ಕಂಡು ಆತಂಕ ಗೊಂಡು ವೇಗವಾಗಿ ಕಾರನ್ನು ಹಿಂಬದಿ ಚಲಾಯಿಸಿದ್ದಾರೆ. ಅದೃಷ್ಟವಶತ್ ಅವರು ಸ್ವಲ್ಪ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಜೋಡಿ ಹುಲಿ ಉಮೇಶ್ ಗೌಡರ ತೋಟದಲ್ಲಿ ಮರೆಯಾಗಿದೆ ಎಂದು ತಿಳಿಸಿದರು.ಇದರಿಂದ ಕಾಫಿ ತೋಟದಲ್ಲಿ ಕೂಲಿ ಕೆಲಸಕ್ಕೆ ಹೋಗುವ ಕೂಲಿ ಕಾರ್ಮಿಕರು ಎಚ್ಚರದಿಂದ ಇರಬೇಕು ಎಂದು ಎಚ್ಚರಿಸಿದ್ದಾರೆ.

ಅರಣ್ಯ ಸಿಬ್ಬಂದಿ ಮೌಸಿನ್ ಅವರಿಗೆ ಮಾಹಿತಿ ನೀಡಲಾಗಿದೆ.

✍️ವರದಿ :ಸೂರಿ ಬಣಕಲ್