ಪ್ರಾಥಮಿಕ ಶಾಲಾ ಕ್ರೀಡಾಕೂಟ:ಬಣಕಲ್ ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ, ಬಣಕಲ್ ಮತ್ತು ಬಾಳೂರು ಹೋಬಳಿ ವಲಯ ಮಟ್ಟದ ,ಪ್ರಾಥಮಿಕ ಶಾಲಾ ಮಟ್ಟದ ಕ್ರೀಡಾಕೂಟದಲ್ಲಿ ಬಣಕಲ್ ಆಂಗ್ಲ ಮಾಧ್ಯಮ ರಿವರ್ ವ್ಯೂ ಶಾಲೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನುಗಳಿಸುವುದರ ಮೂಲಕ ಶಾಲೆಗೆ ಹೆಮ್ಮೆ ತಂದಿದ್ದಾರೆ.

ಪ್ರಾಥಮಿಕ ಬಾಲಕರ ವಿಭಾಗದಲ್ಲಿ (1)7ನೇ ತರಗತಿ ವಿದ್ಯಾರ್ಥಿ ಆದಿತ್ಯ ಹೈ ಜಂಪ್ ನಲ್ಲಿ ಮೊದಲನೇ ಸ್ಥಾನ ,ಡಿಸ್ಕಸ್ ತ್ರೋ ದ್ವಿತೀಯ ಸ್ಥಾನ ,ಹಾಗೂ 200ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.(2)7ನೇ ತರಗತಿಯ ಎಂ.ಡಿ.ತಮಿಮ್ ಲಾಂಗ್ ಜಂಪ್ ನಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿದ್ದಾರೆ.(3) 7ನೇ ತರಗತಿಯ ಸ್ಟಿವನ್ ಡಿಸೋಜ 600ಮೀಟರ್ ಓಟದಲ್ಲಿ ಪ್ರಥಮ ಸ್ಥಾನ. ಹಾಗೂ ಲಾಂಗ್ ಜಂಪ್ ನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.(4)7ನೇ ತರಗತಿಯ ಆರ್ಯವರ್ಧನ್ 400ಮೀಟರ್ ಓಟದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.ಬಾಲಕರ ಗ್ರೂಪ್ ವಿಭಾಗದಲ್ಲಿ (1)ವಾಲಿಬಾಲ್ ದ್ವಿತೀಯ ಸ್ಥಾನ. (2)ಬಾಲ್ ಬ್ಯಾಡ್ಮಿಂಟನ್ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾರೆ.

ಬಾಲಕಿಯರ ವಿಭಾಗದಲ್ಲಿ(1)7ನೇ ತರಗತಿಯ ನಿತ್ಯ ಶೆಟ್ಟಿ ಹೈ ಜಂಪ್ ನಲ್ಲಿ ಪ್ರಥಮ ಸ್ಥಾನ.4ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಹಾಗೂ 200ಮೀಟರ್ ಓಟದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾಳೆ.(2)6ನೇ ತರಗತಿಯ ಸಂದ್ಯಾ ಲಾಂಗ್ ಜಂಪ್ ನಲ್ಲಿ ಮೊದಲನೇ ಸ್ಥಾನ ಹಾಗೂ 400ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ.(3) 7ನೇ ತರಗತಿಯ ಆಫ್ರೀನಾ ಲಾಂಗ್ ಜಂಪ್ ನಲ್ಲಿ ಎರಡನೇ ಸ್ಥಾನ ಹಾಗೂ ಶಾರ್ಟ್ ಫುಟ್ ನಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದಾಳೆ.(4)7ನೇ ತರಗತಿಯ ಪ್ರಗತಿ ಶಾರ್ಟ್ ಫುಟ್ ನಲ್ಲಿ ಎರಡನೇ ಸ್ಥಾನ.ಹಾಗೂ 400ಮೀಟರ್ ಓಟದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾಳೆ.(5)7ನೇ ತರಗತಿಯ ತನಿಷಾ 400ಮೀಟರ್ ಓಟದಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದಾಳೆ.

ಶಾಲೆಯ ಮಕ್ಕಳ ಸಾಧನೆ ಹೆಮ್ಮೆ ಪಡುವಂಥದ್ದು ಮುಂದಿನ ಹಂತದಲ್ಲಿ ವಿದ್ಯಾರ್ಥಿಗಳು ಮತ್ತಷ್ಟು ಸಾಧನೆ ಮಾಡಲು ಇದು ಪ್ರೇರಣೆ.ನಮ್ಮ ವಿದ್ಯಾರ್ಥಿಗಳು ಆಟೋಟದಲ್ಲೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ರಿವರ್ ವ್ಯೂ ಶಾಲೆಯ ನಿರ್ದೇಶಕರಾದ ಮಹಮ್ಮದ್ ಇಮ್ರಾನ್ ರವರು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅವರು ದ್ಯೆಹಿಕ ಶಿಕ್ಷಕರ ಶ್ರಮ, ಶಿಕ್ಷಕ ವೃಂದ ಹಾಗೂ ಆಡಳಿತ ಮಂಡಳಿಯ ಬೆಂಬಲದಿಂದ ಮಕ್ಕಳ ಈ ಸಾಧನೆ ನೋಡುವಂತಾಯಿತು ಎಂದು ಸಂತಸ ಹಂಚಿಕೊಂಡರು.

ವರದಿ :✍️ಸೂರಿ ಬಣಕಲ್