ಬಣಕಲ್ :ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಬಣಕಲ್ ಪ್ರೌಢಶಾಲೆಯಲ್ಲಿ ರಿವರ್ಸ್ ಕಾರ್ ರೇಸ್, ಸ್ಲೋ ಬೈಕ್ ರೇಸ್, ಮಹಿಳೆಯರಿಗೆ ಮ್ಯೂಸಿಕಲ್ ಚೇರ್, ಶಾಲಾ ವಿದ್ಯಾರ್ಥಿಗಳಿಗೆ ರನ್ನಿಂಗ್ ರೇಸ್ ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ನಿನ್ನೆ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಸಿದ್ದಿಕ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಗಸ್ಟ್ 15ರಂದು ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.ಕಳೆದ 6ವರ್ಷಗಳಿಂದ ಕ್ಲಬ್ ನ ಸದಸ್ಯರು ಯಶಸ್ವಿಯಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಯಶಸ್ವಿಯಾಗಿದ್ದಾರೆ.ಈ ವರ್ಷವೂ ಸಹ ರೇಸ್ ಅನ್ನು ಆಯೋಜಿಸಿದ್ದಾರೆ.ಸಮಾನ್ಯವಾಗಿ ವಾಹನಗಳ ರೇಸ್ ನಲ್ಲಿ ಅತಿವೇಗವಾಗಿ ರೇಸ್ ಓಡಿಸುವುದನ್ನ ನೀವು ನೋಡಿರುತ್ತೀರಿ. ಇದು ಕೂಡ ವೇಗವಾಗಿ ಓಡಿಸುವ ರೇಸ್ ಆದರೇ ರಿವರ್ಸ್ ಗೇರ್ ನಲ್ಲಿ ಹಿಮ್ಮುಖವಾಗಿ ಓಡಿಸುವ ಸ್ಪರ್ದೆ.ನೋಡುಗರಿಗೆ ಮುದನೀಡುತ್ತದೆ.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ