ಬಣಕಲ್ :ರಸ್ತೆ ಇನ್ನಿತರ ಪ್ರದೇಶಗಳಲ್ಲಿ ನೂರಾರು ಬೀದಿ ದನಗಳು ಓಡಾಡುತ್ತಿದ್ದು, ಕೆಲವೊಂದು ದನಗಳು ವಾಹನ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದು . ಇದನ್ನು ತಡೆಯುವ ಉದ್ದೇಶದಿಂದ ನಮ್ಮೂರ ಬಣಕಲ್ ವಾಟ್ಸಾಪ್ ಗ್ರೂಪ್ ಯುವಕರು ಬೀದಿ ದನಗಳ ಕೊರಳಿಗೆ ಮಿನುಗುವ ರಿಪ್ಲೆಕ್ಟರ್ ಬೆಲ್ಟ್ ಅಳವಡಿಸುವ ಮೂಲಕ ಮಾದರಿಯಾಗಿದ್ದಾರೆ .
ನಮ್ಮೂರ ಬಣಕಲ್ ವಾಟ್ಸಾಪ್ ಗ್ರೂಪ್ ನ ಸದಸ್ಯ ಲಾರೆನ್ಸ್ ಅವರು ಈ ಮಾದರಿ ಕಾರ್ಯ ನಡೆಸಲು ಯುವಕರೊಂದಿಗೆ ಚರ್ಚಿಸಿ ಯುವಕರ ಸಹಕಾರ ಪಡೆದು ತನ್ನ ಸ್ವಂತ ಖರ್ಚಿನಿಂದ ಬೆಲ್ಟ್ ತರಿಸಿದ್ದಾರೆ,
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೀದಿ ದನಗಳು ವಾಹನ ಅಪಘಾತಕ್ಕೆ ಸಿಲುಕಿ ಮರಣ ಹೊಂದುತ್ತಿದ್ದು, ಇದನ್ನು ತಡೆಯುವ ಉದ್ದೇಶದಿಂದ ಈ ನೂತನ ಮಾದರಿಯನ್ನು ಬಣಕಲ್ ನಲ್ಲಿ ನಿನ್ನೆ ರಾತ್ರಿಯಿಂದ ನಮ್ಮೂರ ಬಣಕಲ್ ವಾಟ್ಸಾಪ್ ಗ್ರೂಪ್ ನಾ ಯುವಕರು ನಗರದಲ್ಲಿ ಓಡಾಡುವ ಸುಮಾರು 50 ಬೀದಿ ದನಗಳಿಗೆ ಈಗಾಗಲೇ ಕೊರಳಪಟ್ಟಿಯನ್ನು ಅಳವಡಿಸಿದ್ದಾರೆ
ಸುಮಾರು 1000 ಕೊರಳ ಪಟ್ಟಿಯನ್ನು ಇಂಧೋರ್ನಿಂದ ಜಿಲ್ಲೆಗೆ ತರಿಸಲಾಗಿದೆ. ಅವುಗಳಲ್ಲಿ 200 ಕೊರಳಪಟ್ಟಿಗೆ ತಾವೇ ಸ್ವಂತ ಖರ್ಚಿನಿಂದ ಬಣಕಲ್ ಗೆ ತರಿಸಿದ್ದಾರೆ.
ಒಂದು ಬೆಲ್ಟಿಗೆ 50ರೂ
ಬೀದಿ ದನಗಳು ಹೆಚ್ಚಾಗಿ ಇರುವ ಮತ್ತು ಅವುಗಳಿಂದ ಅಪಘಾತಗಳು ನಡೆಯುವ ಪ್ರದೇಶಗಳಲ್ಲಿ ಹೆಚ್ಚಿನ ದನಗಳ ಕೊರಳಿಗೆ ರಿಫ್ಲೆಕ್ಟರ್ ಬೆಲ್ಟ್ಗಳನ್ನು ಹಾಕಲಾಗಿದೆ.
ಅಂದಹಾಗೆ, ಈ ಒಂದು ಬೆಲ್ಟ್ಗೆ ಸುಮಾರು 50ರೂ. ವೆಚ್ಚ ತಗುಲುತ್ತಿದ್ದು, ಲಾರೆನ್ಸ್ ಅವರ ಕಾರ್ಯಕ್ಕೆ ಜನ ಮೆಚ್ಚುಗೆ ಸೂಚಿಸಿದ್ದಾರೆ.
ಅಪಘಾತ ತಡೆಯಲು ಸಹಕಾರಿ
ಬೀದಿ ದನಗಳ ಕೊರಳಿಗೆ ರಿಪ್ಲೆಕ್ಟರ್ ಬೆಲ್ಟ್ ಅಳವಡಿಸುವುದರಿಂದ ದನಗಳ ಜೀವ ಉಳಿಯುವ ಜತೆ ವಾಹನ ಸವಾರರ ಜೀವವೂ ಉಳಿಯುತ್ತದೆ. ಅನೇಕ ಬಾರಿ ವಾಹನಗಳು ದನಗಳಿಗೆ ಢಿಕ್ಕಿ ಹೊಡೆದು ಸವಾರರಿಗೂ ಅವಘಡ ಸಂಭವಿಸಿದ ಉದಾಹರಣೆಗಳಿವೆ. ಇದನ್ನು ತಡೆಯಲು ರಿಪ್ಲೆಕ್ಟರ್ ಬೆಲ್ಟ್ ನೆರವಾಗುತ್ತದೆ.
ರಿಫ್ಲೆಕರ್ ಬೆಲ್ಟ್ ಉಪಯೋಗ
ನಗರದ ರಸ್ತೆಗಳಲ್ಲಿ ಅಪಘಾತ ತಪ್ಪಿಸುವ ಉದ್ದೇಶದಿಂದ ರಸ್ತೆ ಬದಿಯ ಕಂಬಗಳಿಗೆ ಹಾಕುವಂತಹ ರೀತಿಯ ಬೆಲ್ಟ್ ಮಾದರಿಯನ್ನು ದನಗಳಿಗೂ ಹಾಕಿದಾಗ ರಾತ್ರಿ ಈ ಬಣ್ಣದ ಪಟ್ಟಿಯ ಮೇಲೆ ಬೆಳಕು ಬಿದ್ದಾಗ ಮಿನುಗುತ್ತದೆ. ಈ ಸಮಯದಲ್ಲಿ ದನದ ಚಲನವಲನ ಬೈಕ್ ಸವಾರನಿಗೆ ದೂರದಿಂದಲೇ ತಿಳಿಯುತ್ತದೆ. ಇದರಿಂದಾಗಿ ವಾಹನ ಸವಾರರ ಮುನ್ನೆಚ್ಚರಿಕೆಗೆ ಸಹಕಾರಿಯಾಗುತ್ತದೆ. ರಾಷ್ಟೀಯ ಹೆದ್ದಾರಿಗಳಲ್ಲಿ ವಾಹನಗಳ ಅಪಘಾತಕ್ಕೆ ದನಗಳು ಸಾವನ್ನಪ್ಪುತ್ತಿದ್ದು, ಇದನ್ನು ತಡೆಯುವ ಉದ್ದೇಶದಿಂದ ದನಗಳ ಕೊರಳಿಗೂ ರಿಪ್ಲೆಕ್ಟರ್ ಪಟ್ಟಿ ಅಳವಡಿಸುವ ನಮ್ಮೂರ ಬಣಕಲ್ ವಾಟ್ಸಾಪ್ ಗ್ರೂಪ್ ಯುವಕರ ಚಿಂತನೆಗೆ ಜನ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಈ ಕಾರ್ಯಕ್ಕೆ ಗ್ರೂಪ್ ನಾ ಅಡ್ಮಿನ್ ಗಳಾದ ಅರುಣ್ ಪೂಜಾರಿ .ಸೂರಿ,ರಂಗನಾಥ್ ಹಾಗೂ ಸದಸ್ಯರಾದ ಅರುಣ್ ರೋಡ್ರಿಗಸ್, ಲಾರೆನ್ಸ್ ಫರ್ನಾಂಡಿಸ್, ಚಂದನ್.ವಿಕ್ಕಿ.ಪೃಥ್ವಿ.ರಶೀದ್, ಸಮಂತ್ ಇನ್ನಿತರರು ಕೈ ಜೋಡಿಸಿದರು.
✍️ವರದಿ: ಸೂರಿ ಬಣಕಲ್