ಬಣಕಲ್ ನಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮ: ಶಾಲಾ ಮಕ್ಕಳಿಂದ ಭವ್ಯ ಮೆರವಣಿಗೆ


ಬಣಕಲ್ : ದೇಶಾದ್ಯಂತ 75ನೇ ಸ್ವಾತಂತ್ರ್ಯಅಮೃತ ಮಹೋತ್ಸವದ ಹಿನ್ನೆಲೆ ಸೋಮವಾರ ಬಣಕಲ್ ನಲ್ಲಿ ಸಂಭ್ರಮ ಸಡಗರದಿಂದ ಆಚರಿಸಿದರು ಭಾರತವು ತನ್ನ ಸ್ವಾತಂತ್ರ್ಯದಿನವನ್ನು ಪ್ರತಿವರ್ಷ ಆಗಸ್ಟ್ 15ರಂದು ಸ್ಮರಿಸುತ್ತದೆ ದೇಶಾದ್ಯಂತ ಅಪಾರ ಉತ್ಸಾಹ ಮತ್ತು ಹೆಮ್ಮೆಯಿಂದ ವರ್ಷಗಳ ಹೋರಾಟ ಮತ್ತು ತ್ಯಾಗದ ನಂತರ 1947ರಲ್ಲಿ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ವಾರ್ಷಿಕೋತ್ಸವವಾಗಿದೆ ಈ ದಿನವೂ ದೇಶದ ಸ್ವಾತಂತ್ರ್ಯವನ್ನು ಮಾತ್ರವಲ್ಲದೆ ಸ್ವಾತಂತ್ರವನ್ನು ಸಾಧಿಸಲು ದೀರ್ಘಾವಧಿಯಲ್ಲಿ ತಮ್ಮ ಪ್ರಾಣವನ್ನು ನೀಡಿದವರನ್ನು ಸಹ ಸ್ಮರಿಸುವ ದಿನ ಇಂದು ಬಣಕಲ್ ನಲ್ಲಿ ಪ್ರೌಢ ಶಾಲೆ, ವಿದ್ಯಾಭಾರತಿ, ರಿವರ್ ವ್ಯೂ, ನಜೆರೆತ್, ಉರ್ದು ಶಾಲೆ, ಕನ್ನಡ ಮಾಧ್ಯಮ ಶಾಲೆ,ಕಾಲೇಜು, ಬಣಕಲ್ ಗ್ರಾಮ ಪಂಚಾಯಿತಿ, ಬಣಕಲ್ ಮೋಹಿದ್ದಿನ್ ಜುಮ್ಮಾ ಮಸೀದಿ, ಶ್ರಮ ಜೀವಿ ಆಟೋ ಸಂಘ, ಅಂಚೆ ಕಚೇರಿ ಪೊಲೀಸ್ ಠಾಣೆ ಸೇರಿದಂತೆ ಹೀಗೆ ಎಲ್ಲಾ ಸರ್ಕಾರಿ ಕಚೇರಿ ಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯಿತು. ಬೆಳಗ್ಗೆ 9ಗಂಟೆಗೆ ಧ್ವಜಾರೋಹಣ ಮಾಡಿದ ನಂತರ ಬಣಕಲ್ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೈಯಲ್ಲಿ ರಾಷ್ಟ್ರಧ್ವಜ ಹಾಗೂ ಮಹಾತ್ಮಗಾಂಧೀಜಿ ಫೋಟೋ ಹಿಡಿದು ಬಣಕಲ್ ರಾಜಬೀದಿಯಲ್ಲಿ ಸ್ವಾತಂತ್ರ್ಯ ಘೋಷಣೆಯೊಂದಿಗೆ ಮೆರವಣಿಗೆ ಮಾಡಿದರು ,ದೇಶ ಭಕ್ತಿ ಗೀತೆಯನ್ನು ಹಾಡುತ್ತ ಸ್ವಾತಂತ್ರ ಹೋರಾಟಗಾರರಿಗೆ ಜೈಕಾರ ಕೂಗುತ್ತ ಸ್ವಾತಂತ್ರೋತ್ಸವಕ್ಕೆ ಮೆರಗು ನೀಡಿದರು.

Sahifa Theme License is not validated, Go to the theme options page to validate the license, You need a single license for each domain name.