ಕೃಷಿ ಇಲಾಖೆಗೆ ಸೇರಿದ ಜಾಗದಲ್ಲಿ ಮೆಸ್ಕಾಂ ಗೆ ಹೋಗಲು ರಸ್ತೆ ಬಿಟ್ಟಿರುವುದಕ್ಕೆ ಗ್ರಾಮಸ್ಥರ ಆಕ್ರೋಶ

ಬಣಕಲ್ :ಕೃಷಿ ಇಲಾಖೆಗೆ ಸೇರಿದ ಜಾಗವನ್ನು ಮೆಸ್ಕಾಂ ಗೆ ಹೋಗಲು ರಸ್ತೆ ಬೇಕಾಗಿದೆ ಎಂದು ಇರೋ ಸ್ವಲ್ಪ ಜಾಗದಲ್ಲಿ 10ಅಡಿ ಅಗಲ ಸುಮಾರು 120 ಅಡಿ ಉದ್ದ ಜಾಗವನ್ನು ರಸ್ತೆಗೆ ಮೀಸಲಿಟ್ಟಿರುವುದು ಗ್ರಾಮಸ್ಥರ ಆಕ್ರೋಶಕ್ಜೆ ಕಾರಣವಾಗಿದೆ.ಕೃಷಿ ಇಲಾಖೆಗೆ ಯಾವುದೇ ಕಟ್ಟಡ ಇರುವುದಿಲ್ಲ ಅನ್ನೋಕಾರಣಕ್ಕೆಹಿಂದಿನ ಗ್ರಾಮ ಪಂಚಾಯಿತಿ ವತಿಯಿಂದ ಆಗಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಸಭಾ ನಡವಳಿ ಮೂಲಕ ಬಣಕಲ್ ಮೆಸ್ಕಾಂ ಪಕ್ಕದಲ್ಲಿ5ಕುಂಟೆ ಜಾಗವನ್ನು ಕೃಷಿ ಇಲಾಖೆಗೆ ಬಿಟ್ಟಿದ್ದರು ಆದರೆ ಆ ಜಾಗದಲ್ಲಿ ಯಾರೋ ಒಬ್ಬರು ಸಾರ್ವಜನಿಕ ಅರ್ಜಿ ಮೂಲಕ ಮೆಸ್ಕಾಂ ಗೆ ಮತ್ತು ಕೃಷಿ ಇಲಾಖೆಗೆ ಹೋಗಲು ರಸ್ತೆ ಬೇಕು ಎಂದು ಅರ್ಜಿ ಕೊಟ್ಟಿರುವ ಕಾರಣಕ್ಕೆ ಕೃಷಿ ಇಲಾಖೆಗೆ ಸೇರಿದ ಜಾಗದಲ್ಲಿ 12ಅಡಿ ಜಾಗವನ್ನು ಗ್ರಾಮ ಪಂಚಾಯಿತಿಯವರು ರಸ್ತೆಗೆ ಬಿಟ್ಟಿದ್ದಾರೆ ಎಂದು ಗ್ರಾಮಸ್ಥರ ಆರೋಪವಾಗಿದೆ ಆದರೆ ಈಗಾಗಲೇ ಮೆಸ್ಕಾಂಗೆ ಹೋಗಲು 3 ದಾರಿ ಇದೆ ಕೃಷಿ ಇಲಾಖೆ ಕಟ್ಟಡ ಕಾಮಗಾರಿ ಇನ್ನೂ ಪ್ರಾರಂಭಗೊಂಡಿಲ್ಲ ಕಟ್ಟಡ ಆದರೂ ಸಹ ಕೃಷಿ ಇಲಾಖೆ ರಸ್ತೆ ಬದಿ ಇರುವುದರಿಂದ ಹೋಗಲು ರಸ್ತೆ ಅವಶ್ಯಕತೆ ಇರುವುದಿಲ್ಲ.ಈಗಾಗಿ ಯಾರೋ ಒಬ್ಬ ತನ್ನ ವೈಯಕ್ತಿಕ ಉದ್ದೇಶಕ್ಕೆ ಸಾರ್ವಜನಿಕ ಅರ್ಜಿ ಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಯಾರನ್ನೋ ಮೆಚ್ಚಿಸಲು ಕೃಷಿ ಇಲಾಖೆಗೆ ಸೇರಿದ ಜಾಗವನ್ನು ರಸ್ತೆಗೆ ಬಿಟ್ಟಿರುತ್ತಾರೆ.ಆ ಜಾಗ ಇರುವುದು ಕೇವಲ 30ಅಡಿ ಅಗಲ ಅದರಲ್ಲಿ 10 ಅಡಿ ಹೋಯಿತು ಎಂದರೆ ಉಳಿಯುವುದು 20 ಅಡಿ ಉಳಿದ 20 ಅಡಿ ಜಾಗದಲ್ಲಿ ಕಟ್ಟಡ ಕಟ್ಟಲು ಸ್ಥಳವಕಾಶದ ಕೊರತೆ ಇದೆ ಈ ವಿಷಯವಾಗಿ ನಾವು ಶನಿವಾರದಂದು ಅರ್ಜಿಕೋಟ್ಟು ಈ ವಿಚಾರವಾಗಿ ಚರ್ಚಿಸಲು ಸೋಮವಾರ ದಿವಸ ಗ್ರಾಮ ಪಂಚಾಯಿತಿಯಲ್ಲಿ ಚರ್ಚಿಸಲು ತೀರ್ಮಾನಿಸಲಾಗಿತು.ಆದರೆ ಸೋಮವಾರ ದಿನ ಬಂದರೆ ಒಬ್ಬರೇ ಒಬ್ಬ ಸದಸ್ಯರು ಹಾಜರಿರುವುದಿಲ್ಲ ಅಧ್ಯಕ್ಷರನ್ನು ವಿಚಾರಿಸಿದರೆ ಅವರು ಅನಾರೋಗ್ಯ ಹೊಂದಿದ್ದಾರೆ ಎಂಬ ಉತ್ತರ ಕೊಟ್ಟಿದ್ದಾರೆ ಉಪಾಧ್ಯಕ್ಷರಿಗೆ ಕರೆ ಮಾಡಿದರೆ ನನಗೆ ಬರಲಾಗುವುದಿಲ್ಲ ನಾವು ಒಂದು ದಿನ ನಿಗದಿ ಮಾಡುತ್ತೇವೆ ಆದಿನ ನೀವುಗಳು ಬನ್ನಿ ಎಂಬ ಹಾರಿಕೆ ಉತ್ತರ ನೀಡಿದ್ದಾರೆ ಇವರು ನಿಗದಿ ಮಾಡಿದ ದಿನ ಸಾರ್ವಜನಿಕರು ಬರಬೇಕೆಂದರೆ ಅದು ಯಾವರೀತಿ ನ್ಯಾಯ ಇದನ್ನು ನಾವು ಇಲ್ಲಿಗೆ ಬಿಡುವುದಿಲ್ಲ ಮುಂದಿನ ದಿನ ಉಗ್ರ ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ಥ ಅಭಿಶೇಕ್ ತಿಳಿಸಿದ್ದಾರೆ..ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಾಜೇಶ್. ಶ್ರೀಜಿತ್. ಅಶೋಕ. ಅಭಿ. ಜಗದೀಶ್.ಸಚಿನ್.ರಘು ಪ್ರದೀಪ್ ಸಂತೋಷ್ ಉಮೇಶ್ ಇತರರು ಹಾಜರಿದ್ದರು

Sahifa Theme License is not validated, Go to the theme options page to validate the license, You need a single license for each domain name.