ಈಶ ಫೌಂಡೇಷನ್ನ ಸಾಮಾಜಿಕ ಅಭಿವೃದ್ಧಿ ಅಂಗವಾದ ಈಶ ಔಟ್ರೀಚ್ ವತಿಯಿಂದ ಕರ್ನಾಟಕದ 13ಜಿಲ್ಲೆಗಳ 3200ಕ್ಕೂ ಹಳ್ಳಿಗಳಲ್ಲಿ ಈಶ ಗ್ರಾಮೋತ್ಸವ ನಡೆದಿತ್ತು.
ಗ್ರಾಮೀಣ ಭಾರತದ ಅತಿ ದೊಡ್ಡ ಕ್ರೀಡಾಕೂಟ ಚಿಕ್ಕಮಗಳೂರಿನಲ್ಲಿ ನಡೆಯಿತು. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಯ ವಾಲಿಬಾಲ್ ತಂಡಗಳು ಭಾಗವಹಿಸಿದ್ದವು. ತೀವ್ರ ಪೈಪೋಟಿಯಿಂದ ನಡೆದ ಪಂದ್ಯದಲ್ಲಿ ಬಣಕಲ್ ನ ಅಲಿಫ್ ಸ್ಟಾರ್ ತಂಡ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಪ್ರವೇಶ ಪಡೆದಿದೆ.
ರಾಜ್ಯ ಮಟ್ಟಕ್ಕೆಆಯ್ಕೆಯಾದ ಅಲೀಫ್ ಸ್ಟಾರ್ ತಂಡದ ಆಟಗಾರರು ನಾಯಕ :ಆದಿಲ್. ಉಪನಾಯಕ :ಕಿಶೋರ್, ಸಫಾನ್,ನಿಹಾಲ್,ಮನೋಜ್.ಸೂಹೆಲ್, ರೀಫಾದ್, ರಶೀದ್, ಆಕಾಶ್, ಕಿರಣ, ಭಾಗವಹಿಸಿದ್ದರು.ಮುಂದಿನ ಹಂತ ಮೈಸೂರ್ ನಲ್ಲಿ ನಡೆಯಲಿದ್ದು,ಬಣಕಲ್ ಗ್ರಾಮ ಪಂಚಾಯಿತಿ ಹೆಸರು ಜಿಲ್ಲೆಯಲ್ಲಿ ಮೊಳಗುವಂತೆ ಮಾಡಿದ್ದಾರೆ ಮೈಸೂರು ನಲ್ಲಿ ನಡೆಯುವ ರಾಜ್ಯ ಮಟ್ಟದ ಪಂದ್ಯಾವಳಿ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಲಿ ಎಂಬುದು ಬಣಕಲ್ ಜನರ ಆರೈಕೆ.
ವರದಿ✍️:ಸೂರಿ ಬಣಕಲ್