ಬಣಕಲ್ : ಗ್ರಾಮದ ಸುರೇಶ್ ಎಂಬುವವರು ಸಾಕಿದ ಕೋಳಿಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು 14ಕ್ಕೂ ಹೆಚ್ಚು ಕೋಳಿಗಳನ್ನು ಅರ್ಧಂಬರ್ಧ ತಿಂದು ಬಿಟ್ಟಿವೆ.
ಬಣಕಲ್ ಗ್ರಾಮದ ಮತ್ತಿಕಟ್ಟೆ ರಸ್ತೆಯ ಸುಣ್ಣದ ಗೂಡು ಸಮೀಪ ವಾಸವಿರುವ ಸುರೇಶ್ ಎಂಬುವವರು 30ಕ್ಕೂ ಹೆಚ್ಚು ಕೋಳಿಗಳನ್ನು ಸಾಕಿಕೊಂಡಿದ್ದರು, ರಾತ್ರಿಯ ಸಮಯದಲ್ಲಿ ಗೂಡಿನೊಳಗೆ ಇದ್ದ ಕೋಳಿಗಳನ್ನು ಎಲ್ಲಿಂದಲೋ ಬಂದ ನಾಯಿಗಳು ಜಾಲರಿಗಳನ್ನು ಎಳೆದು ಒಳಗಿದ್ದ ಕೋಳಿಗಳನ್ನು ಕೊಂದು ಹಾಕಿವೆ. ಇದರಿಂದ ಮನೆಯವರು ಆತಂಕ ಗೊಂಡಿದ್ದಾರೆ.
ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಗುಂಪಿನಲ್ಲಿ ಇರುವ ನಾಯಿಗಳು ಫಾರೆಸ್ಟ್ ನಲ್ಲಿ ಬಿಸಾಡಿರುವ ಮಾಂಸದ ತ್ಯಾಜ್ಯಗಳ್ಳನ್ನು ತಿಂದು ಮಾಂಸದ ರುಚಿ ಹಿಡಿದು ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿದೆ.ಯಾವಾಗ ಯಾರ ಮೇಲೆ ದಾಳಿ ಮಾಡುತ್ತದೆ ಎನ್ನಲು ಸಾಧ್ಯವಿಲ್ಲ ಇಂದು ಕೋಳಿಗಳ ಮೇಲೆ ದಾಳಿ ಮಾಡಿರುವ ಬೀದಿ ನಾಯಿಗಳು ಮುಂದೆ ಮಕ್ಕಳ ಮೇಲೆ ದಾಳಿ ಮಾಡುವ ಸಾಧ್ಯತೆಗಳಿವೆ. ಹಾಗಾಗಿ ಬೀದಿ ನಾಯಿಗಳನ್ನು ನಿಯಂತ್ರಿಸುವ ಕೆಲಸ ಆಗಬೇಕಿದೆ ಎಂದು ಸುರೇಶ್ ರವರು ಅಗ್ರಹಿಸಿದ್ದಾರೆ.
ವರದಿ ✍️ಸೂರಿ ಬಣಕಲ್