ಬಣಕಲ್ ಮತ್ತಿಕಟ್ಟೆ ರಸ್ತೆಯಲ್ಲಿ ಬೇಕಾ ಬಿಟ್ಟಿ ವಾಹನ ನಿಲುಗಡೆ ಸಂಚಾರಕ್ಕೆ ಅಡೆ ತಡೆ

ಬಣಕಲ್: ಗ್ರಾಮದ ನಾನಾ ಭಾಗಗಳಿಂದ ಶಾಲೆಗಳಿಗೆ ಬರುವ ಶಾಲಾ ವಾಹನಗಳು ಆಸ್ಪತ್ರೆಗಳಿಗೆ ರೋಗಿಗಳನ್ನು ಹೊತ್ತು ಬರುವ ಆಂಬುಲೆನ್ಸ್ ಗಳು ಹಾಗೂ ಸರ್ಕಾರಿ ಬಸ್ ಗಳಿಗೆ ಬಣಕಲ್- ಮತ್ತಿಕಟ್ಟೆಯ ಕಿರಿದಾದ ರಸ್ತೆಯಲ್ಲಿ ಪ್ರತಿದಿನ ವಾಹನಗಳು ಬೇಕಾ ಬಿಟ್ಟಿ ನಿಲ್ಲಿಸುವುದರಿಂದ ಟ್ರಾಫೀಕದ್ದೇ ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ.

ಹೊರಗಿನಿಂದ ಬರುವ ವಾಹನಗಳು ನಡು ರಸ್ತೆಯಲ್ಲೇ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ತಮ್ಮ ಕೆಲಸ ಕಾರ್ಯಗಳು ಮುಗಿಯುವವರೆಗೂ ರಸ್ತೆಯಲ್ಲೇ ನಿಲ್ಲಿಸಿ ಹೋಗುತ್ತಾರೆ. ಇದರಿಂದ ಬೇರೆ ವಾಹನಗಳಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಸವಾರರನ್ನು ಕೇಳುವರೇ ಇಲ್ಲದಿದ್ದರಿಂದ ಅಡ್ಡಾದಿಡ್ಡಿಯಾಗಿ ನಡು ರಸ್ತೆಯಲ್ಲಿ ನಿಲ್ಲಿಸಿದರೂ ಯಾರು ಕೇಳುವುದಿಲ್ಲ ಎಂಬುದು ಅವರ ಬೇಜವಾಬ್ದಾರಿಗೆ ಕಾರಣ. ಅಡ್ಡಾ-ದಿಡ್ಡಿಯಾಗಿ ನಿಲ್ಲಿಸುವ ವಾಹನಗಳಿಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಹೀಗೆ ನಿಲ್ಲಿಸುವ ವಾಹನಗಳಿಂದ ಸಾರ್ವಜನಿಕರು ದಿನ ನಿತ್ಯ ಕಿರಿ ಕಿರಿ ಅನುಭವಿಸುವಂತಾಗಿದೆ. ಇದರ ಬಗ್ಗೆ ಆದಷ್ಟು ಬೇಗ ಗಮನ ಹರಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂಬುದು ಸಾರ್ವಜನಿಕರ ಅಗ್ರಹವಾಗಿದೆ

ವರದಿ :ಸೂರಿ ✍️ಬಣಕಲ್ .