ಕುಂದೂರು ಸಾರಗೋಡು ಬಳಿ ರಸ್ತೆಗೆ ಬೃಹತ್ ಗಾತ್ರದ ಮರ ಬಿದ್ದು ರಸ್ತೆ ಬ್ಲಾಕ್:ತೆರವು ಗೊಳಿಸಿದ ಸ್ಥಳೀಯ ಯುವಕರು

ಕುಂದೂರು ಸಾರಗೋಡ್ ನ ದೊಡ್ಡಹಳ್ಳ ಎಂಬಲ್ಲಿ ಭಾನುವಾರ ರಾತ್ರಿ ಬೃಹತ್‌ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರದಲ್ಲಿ ಅಡಚಣೆ ಉಂಟಾಯಿತು.ಕುಂದೂರ್ ಸಾರಗೋಡು ಹೋಗುವ ರಸ್ತೆ ಬದಿಯಲ್ಲಿದ್ದ ಹಳೆಯ ಮರವೊಂದು ಶಿಥಿಲಗೊಂಡ ಪರಿಣಾಮ ರಸ್ತೆಗೆ ಉರುಳಿ ಬಿದ್ದಿದೆ. ಇದರಿಂದ ರಸ್ತೆಯಲ್ಲಿ ತಾಸುಗಟ್ಟಲೆ ಸಂಚಾರದಲ್ಲಿ ವ್ಯತ್ಯಯವಾಯಿತು.

ಸಾರಗೋಡ್ ಕಡೆ ಹೋಗುವ ಬಸ್ ಸೇರಿದಂತೆ ಹತ್ತಾರು ವಾಹನಗಳು ಕಾಡು ದಾರಿಯಲ್ಲಿ ಸಿಲುಕಿಕೊಂಡಿತು, ಮೊದಲೇ ಕಾಡು ಪ್ರಾಣಿಗಳ ಹಾವಳಿ ಈ ಭಾಗದಲ್ಲಿ ಹೆಚ್ಚಾಗಿವೆ ಮರ ತೆರವು ಗೊಳಿಸದೇ ಇದ್ದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ,ಇದನ್ನು ಮನಗೊಂಡು ಸ್ಥಳೀಯ ಯುವಕರು ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿ ಮರ ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸ್ಥಳೀಯರಾದ ರವೀಂದ್ರ, ಗುಂಡ, ಗೋಪಾಲ, ಮುದ್ದು, ಮುಂತಾದವರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.