ಮೂಡಿಗೆರೆ ತಾಲ್ಲೂಕ್ಕಿನ ಕಲ್ಲುಗುಡ್ಡ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಪ್ರಕಾಶ್ ಹೆಚ್.ಎ. ಅವರಿಗೆ 2023-24ನೇಸಾಲಿನ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ 5ನೇ ಸೆಪ್ಟೆಂಬರ್ 2023ರ ಶಿಕ್ಷಕರ ದಿನಾಚರಣೆಯಂದು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಯಿತು.
ಕಲ್ಲುಗುಡ್ಡ ಶಾಲೆಯ ಶಿಕ್ಷಕರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಬಂದಿರುವುದಕ್ಕೆ ಹೆಮ್ಮೆಯ ವಿಷಯ ಎಂದು ಶಾಲಾ ಆಡಳಿತ ಮಂಡಳಿ ಸಂತಸ ಹಂಚಿಕೊಂಡಿದೆ.ಜನ ಸ್ನೇಹಿ ಶಿಕ್ಷಕರು ಮಕ್ಕಳ ಅಚ್ಚು ಮೆಚ್ಚಿನ ಗುರುಗಳು ಸದಾ ಎಲ್ಲರೊಂದಿಗೂ ಬೆರೆಯುವ ಗುಣ ಅವರನ್ನು ಈ ಮಟ್ಟಿಗೆ ತಂದು ನಿಲ್ಲಿಸಿರುವುದು ನಮಗೆ ಹೆಮ್ಮೆಯ ವಿಷಯ ಎಂದು ಕಲ್ಲುಗುಡ್ಡ ಗ್ರಾಮಸ್ಥರು ಸಂತಸ ಹಂಚಿಕೊಂಡಿದ್ದಾರೆ.
ವರದಿ :✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ