ಬಣಕಲ್:ಜನರಿಗೆ ಅತೀ ಹತ್ತಿರವಿರುವ ಇಲಾಖೆಯೆಂದರೆ ಗ್ರಾಮ ಪಂಚಾಯಿತಿ.ವಿವಿಧ ಮಾನದಂಡಗಳ ಆಧಾರದಲ್ಲಿ ಜಿಲ್ಲೇಯಲ್ಲಿ ಉತ್ತಮ ಸಾಧನೆ ಮಾಡಿರುವ ಗ್ರಾಮ ಪಂಚಾಯತ್ಗಳಲ್ಲಿ ಬಣಕಲ್ ಗ್ರಾಮಪಂಚಾಯಿತಿ 2ನೇ ಸ್ಥಾನಗಳಿಸಿ ಮಾದರಿಯಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತೆ, ಅನುದಾನಗಳ ಸದ್ಬಳಕೆ, ಸಮರ್ಪಕ ತೆರಿಗೆ ಸಂಗ್ರಹ ಇತ್ಯಾದಿಗಳನ್ನು ಆಧರಿಸಿ 2ನೇ ಸ್ಥಾನ ಲಭಿಸಿದೆ .ಜನರ ಬೇಡಿಕೆಗಳ ಈಡೇರಿಕೆ, ಸರಕಾರದ ಯೋಜನೆಗಳು ಬಣಕಲ್ ಗ್ರಾಪಂ ವ್ಯಾಪ್ತಿಯಲ್ಲಿ ಸದ್ಬಳಕೆಯಾಗಿದೆ.ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ ವಿವಿಧ ಯೋಜನೆಗಳು ಜಾರಿಗೊಂಡಿದ್ದು, ಗ್ರಾಮಸ್ಥರಿಗೆ ತಲುಪಿಸುವಲ್ಲಿ ಪಂಚಾಯಿತಿ ಯಶಸ್ವಿಯಾಗಿದೆ. ತೆರಿಗೆ ಸಂಗ್ರಹ, ತೆರಿಗೆ ಪರಿಷ್ಕರಣೆ, ಸ್ವಚ್ಛತೆ ಬಗ್ಗೆ ವಿಶೇಷ ಗಮನಹರಿಸಲಾಗಿದೆ.2ನೇ ಸ್ಥಾನ ಬರುವಲ್ಲಿ ಕಾರಣಕರ್ತರಾದ ಅಧ್ಯಕ್ಷರು,ಅತಿಕಾ ಬಾನು.ಉಪಾಧ್ಯಕ್ಷರು,ಇರ್ಫಾನ್. ಪಂ,ಅಭಿವೃದ್ಧಿ ಅಧಿಕಾರಿ, ಬಿ.ಎನ್.ಕೃಷ್ಣಪ್ಪ.ಗ್ರಾ,ಪಂ, ಸದಸ್ಯರು ಹಾಗೂ ಸಿಬ್ಬಂದಿವರ್ಗದವರ, ಪರಿಶ್ರಮಕ್ಕೆ ಪ್ರತಿಫಲ ದೊರಕಿದೆ.
ವರದಿ :✍️ಸೂರಿ ಬಣಕಲ್