ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಬಡ ಮಹಿಳೆಗೆ ನೆರವು


ಬಣಕಲ್ :ಕೆಳೆದೆರಡು ದಿನಗಳ ಹಿಂದೆ ಸುರಿದ ಗಾಳಿ ಮಳೆಗೆ ಬಣಕಲ್ ಸುಭಾಷ್ ನಗರದ ವಾಸಿಯಾದ ಜೈನಾಬಿ ಎಂಬುವರ ಮನೆಯ ಗೋಡೆ ಸಂಪೂರ್ಣ ಕುಸಿತಗೊಂಡಿತ್ತು ಇದರಿಂದ ಮನೆಯಲ್ಲಿ ಇದ್ದ ವಸ್ತುಗಳು ಸಂಪೂರ್ಣ ಹಾನಿಯಾಗಿ ಮಹಿಳೆಗೆ ದಿಕ್ಕೇ ತೋಚದಂತಾಗಿತ್ತು ಮೇಲ್ಛಾವಣಿ ಕುಸಿತದಿಂದ ಮಳೆಯ ನೀರು ಮನೆಯ ತುಂಬೆಲ್ಲ ನಿಂತಿತ್ತು ಒಂಟಿ ಮಹಿಳೆಗೆ ದಿಕ್ಕೇ ತೋಚದಂತಾಗಿದೆ, ಇಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಬಣಕಲ್ ನ ಸದಸ್ಯರಾದ ಪ್ರವೀಣ್, ಪೂರ್ಣೇಶ್, ಲವರವರು ಮಹಿಳೆಯ ಮನೆಗೆ ಭೇಟಿನೀಡಿ ರೆಡ್ ಕ್ರಾಸ್ ಸಂಸ್ಥೆಯಿಂದ ಟಾರ್ಪಲ್,ಗೃಹಪಯೋಗಿ ಸಾಮಗ್ರಿಗಳನ್ನು ನೀಡಿ ಮಾನವೀಯತೆ ಮೆರೆದರು ರೆಡ್ ಕ್ರಾಸ್ ಸಂಸ್ಥೆ ಸದಸ್ಯ ಪ್ರವೀಣ್ ಗೌಡ ಮಾತನಾಡಿ ನಮ್ಮ ಕೈಲಾದ ಮಟ್ಟಿಗೆ ಸಮಾಜದ ಜೊತೆಗೆ ಸೇವೆ ಮಾಡುವುದರ ಮುಖಾಂತರ ಸಾರ್ಥಕತೆ ಕಂಡುಕೊಳ್ಳಬೇಕು ಎಂದರು ನಾವು ಮಾಡಿದ ಸೇವೆಗೆ ನಾವು ಇರುವಾಗಲೇ ಫಲ ಸಿಗುತ್ತದೆ ಹಾಗಿದ್ದಾಗ ನಮ್ಮ ಕೈಲಾದ ಮಟ್ಟಿಗೆ ನಮ್ಮ ಸಂಸ್ಥೆಯಿಂದ ನೆರವು ನೀಡುತ್ತಿರುವುದು ನಮಗೆ ಹೆಮ್ಮೆ ವಿಷಯ ಎಂದರು ಈ ಸಂದರ್ಭದಲ್ಲಿ ಮಧು. ನಿಶಾಂತ್. ಇಮ್ರಾನ್. ಇದ್ದರು