ಬಣಕಲ್ :ಐ.ಸಿ.ಎಸ್.ಇ ಬೋರ್ಡ್ ನ ಹತ್ತನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು ಬಣಕಲ್ ನ ನಜರತ್ ಶಾಲೆ ಸತತ ಹತ್ತನೇ ವರ್ಷವೂ ಶೇಕಡಾ ನೂರರಷ್ಟು ಫಲಿತಾಂಶ ಪಡೆದಿದೆ. ಪರೀಕ್ಷೆಯಲ್ಲಿ ಹಾಜರಾದ 35 ವಿದ್ಯಾರ್ಥಿಗಳಲ್ಲಿ 32 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 3 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ.
ಪೂರ್ಣೇಶ್ ಮತ್ತಾವರ ಮತ್ತು ರೇಖಾ ಪೂರ್ಣೇಶ್ ರ ಪುತ್ರ
ಸುಜ್ಞಾನ್.ಪಿ ಶೇಕಡಾ 97 ಅಂಕಗಳೊಂದಿಗೆ ಪ್ರಥಮ, ಪೌಲ್ಸನ್ ಮತ್ತು ವಲ್ಸಮ್ಮರವರ ಪುತ್ರಿ ಇಶಾನ.ಎ.ಪೌಲ್ಸನ್ ಶೇಕಡಾ 95 ಅಂಕಗಳೊಂದಿಗೆ ದ್ವಿತೀಯ ಹಾಗೂ ಸುಧಾಕರ್ ಮತ್ತು ಅರ್ಚನಾರವರ ಪುತ್ರ ಲವಣ್.ಎನ್.ಎಸ್ ಹಾಗೂ ರವಿ ಮತ್ತು ಶಶಿಕಲಾರವರ ಪುತ್ರ ಶ್ರೇಯಸ್.ಆರ್ ಶೇಕಡಾ 94 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.
ಇವರ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.
