ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಡಾ,ಇಕ್ಲಾಸ್ ಅಹ್ಮದ್ ರವರಿಗೆ ಸನ್ಮಾನ

ಬಣಕಲ್ :ವಿಶ್ವ ವೈದ್ಯರ ದಿನಾಚರಣೆ ಪ್ರಯುಕ್ತ ಬಣಕಲ್ ಫ್ರೆಂಡ್ಸ್ ಕ್ಲಬ್‌ ವತಿಯಿಂದ ಶುಕ್ರವಾರ ಬಣಕಲ್ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ,ಇಕ್ಲಾಸ್ ಅಹ್ಮದ್ ಅವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬ್ ನ ಗೌರವ ಅಧ್ಯಕ್ಷರಾದ ಪ್ರವೀಣ್ ರವರು ಮಾತನಾಡಿ
ರೋಗಿಗಳು ವೈದ್ಯರನ್ನು ದೇವರೆಂಬ ಭಾವನೆ ಇಟ್ಟು ಚಿಕಿತ್ಸೆ ಪಡೆಯಲು ಬರುತ್ತಾರೆ. ವೈದ್ಯರು ತಾಳ್ಮೆಯಿಂದ ಚಿಕಿತ್ಸೆ ನೀಡಿ ಗುಣಮುಖರಾಗಿಸುತ್ತಾರೆ ಅವರನ್ನು ಸನ್ಮಾನಿಸುವ ಭಾಗ್ಯ ನಮಗೆ ದೊರಕಿರುವುದು ನಮ್ಮೆಲ್ಲರ ಭಾಗ್ಯ ಎಂದರು.

ಈ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬ್‌ ನ ಅಧ್ಯಕ್ಷ ಅರುಣ್ ಪೂಜಾರಿ ಸದಸ್ಯರಾದ ಸೂರಿ ನಿಶಾಂತ್, ಮಧು,ಅಶೋಕ್ ಉತ್ತಮ್ ಸಿದ್ದಿಕ್,ಕಿರಣ್,ಮಣಿಕಂಠ,ರಂಗನಾಥ್,, ಉಪಸ್ಥಿತರಿದ್ದರು.