ಬಣಕಲ್ :ಕೊವಿಡ್ ಕಾರಣದಿಂದ ಕಳೆದ ಎರಡು ವರ್ಷ ಪುನೀತ್ ಅವರು ಅಭಿಮಾನಿಗಳ ಜತೆ ಬರ್ತ್ಡೇ ಆಚರಿಸಿಕೊಂಡಿರಲಿಲ್ಲ. ಈ ಬಾರಿ ಕೊವಿಡ್ ಕಡಿಮೆ ಇದೆ. ಹೀಗಾಗಿ, ಅವರು ಬದುಕಿದ್ದರೆ ಈ ವಿಶೇಷ ದಿನವನ್ನು ಫ್ಯಾನ್ಸ್ ಜತೆ ಸೆಲೆಬ್ರೇಟ್ ಮಾಡುತ್ತಿದ್ದರು.
ಪುನೀತ್ ರಾಜ್ಕುಮಾರ್ ಅವರು ಇಂದು (ಮಾರ್ಚ್ 17) ಬದುಕಿದ್ದರೆ 47ನೇ ವರ್ಷದ ಬರ್ತ್ಡೇಯನ್ನು ಅಭಿಮಾನಿಗಳ ಜತೆಗೂಡಿ ಆಚರಿಸಿಕೊಳ್ಳುತ್ತಿದ್ದರು. ಆದರೆ, ಇಂದು ಅವರು ಅಭಿಮಾನಿಗಳೊಂದಿಗೆ ಇಲ್ಲ. ಅವರಿಲ್ಲ ಎಂಬ ನೋವಿನಲ್ಲೇ ಅಭಿಮಾನಿಗಳು ಬರ್ತ್ಡೇ ಆಚರಿಸಿದರು.. ಇಂದು ಅಪ್ಪು (Appu) ಅವರನ್ನು ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿದೆ. ಬಣಕಲ್ ನಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳು ಅವರ ಭಾವಚಿತ್ರಕ್ಕೆ ಹಾರ ಹಾಕಿ ಕೇಕ್ ಕತ್ತರಿಸಿ ಹುಟ್ಟಿದ ಹಬ್ಬ ಆಚರಿಸಿದರು. ನಂತರ ಪ್ರತಿಕ್ರಿಯಿಸಿದ
ಅಭಿಮಾನಿ ರಂಗನಾಥ್ ಕೊವಿಡ್ ಕಾರಣದಿಂದ ಕಳೆದ ಎರಡು ವರ್ಷ ಪುನೀತ್ ಅವರು ಅಭಿಮಾನಿಗಳ ಜತೆ ಬರ್ತ್ಡೇ ಆಚರಿಸಿಕೊಂಡಿರಲಿಲ್ಲ. ಈ ಬಾರಿ ಕೊವಿಡ್ ಕಡಿಮೆ ಇದೆ. ಹೀಗಾಗಿ, ಅವರು ಬದುಕಿದ್ದರೆ ಈ ವಿಶೇಷ ದಿನವನ್ನು ಫ್ಯಾನ್ಸ್ ಜತೆ ಸೆಲೆಬ್ರೇಟ್ ಮಾಡುತ್ತಿದ್ದರು. ಆದರೆ, ಇನ್ನುಮುಂದೆ ಅದು ಸಾಧ್ಯವೇ ಇಲ್ಲ ಎನ್ನುವುದನ್ನು ನೆನೆದು ದುಃಖವಾಗುತ್ತಿದೆ ಎಂದರು .