ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನೀರಿನ ಟ್ಯಾಂಕ್ ಗೆ ಬಿದ್ದು ಮಗು ಸಾವು

ಮೂಡಿಗೆರೆ: ಆಟವಾಡುತ್ತಿದ್ದ ಬಾಲಕಿ ನೀರಿನ ಟ್ಯಾಂಕ್​ ಗೆ ಬಿದ್ದು ಬಾಲಕಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಇಂದ್ರಾವತಿ ಎಸ್ಟೇಟ್​ ನಲ್ಲಿ ನಡೆದಿದೆ.

ಗೀತಾ-ಶೇಷಪ್ಪ ದಂಪತಿ ಮಗಳು ಪ್ರಾರ್ಥನಾ (7) ಸಾವನ್ನಪ್ಪಿರುವ ಬಾಲಕಿ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮದ ಎಸ್ಟೇಟ್​ ನಲ್ಲಿ ಮಗು ಆಟವಾಡುತ್ತಿದ್ದಾಗ ನೀರಿನ ಟ್ಯಾಂಕ್​ ಗೆ ಬಿದ್ದಿದೆ.

ಮಗು ನೀರಿನ ಟ್ಯಾಂಕ್ ನಲ್ಲಿ ಬಿದ್ದ ಬಳಿಕ, ಆಕೆಗೆ ಉಸಿರಾಟ ತೊಂದರೆಯಾಗಿ ಕೊನೆಯುಸಿರೆಳೆದಿದ್ದಾಳೆ. ಈ ಘಟನೆ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.