ಬಣಕಲ್ ವಿಲೇಜ್ ನಿಂದ ಕೋಗಿಲೆವರೆಗೆ 4ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ:ಶಾಸಕಿ ನಯನ ಮೋಟಮ್ಮರಿಂದ ಭೂಮಿ ಪೂಜೆ

ಸಾರ್ವಜನಿಕರಿಗೆ ಉತ್ತಮ ರಸ್ತೆ ವ್ಯವಸ್ಥೆ ಕುಡಿಯುವ ನೀರಿನ ಸಮಸ್ಯೆ ಸಾರಿಗೆ ವಿದ್ಯುತ್ ಶಿಕ್ಷಣ ಸೇರಿದಂತೆ ಗ್ರಾಮೀಣ ಭಾಗದ ಎಲ್ಲ ಜನರಿಗೆ ಮೂಲ ಸೌಕರ‌್ಯ ಒದಗಿಸಿ ಕೊಡಲು ನಿರಂತರ ಶ್ರಮಿಸುವದಾಗಿ ಶಾಸಕಿ ನಯನ ಮೋಟಮ್ಮ ಹೇಳಿದರು.

ಬಣಕಲ್ ವಿಲೇಜ್ ನಿಂದ ಕೋಗಿಲೆ ವರೆಗೆ 4ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿದ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಗುಣಮಟ್ಟದ ವಿಚಾರದಲ್ಲಿ ರಾಜಿ ಇಲ್ಲಎಂದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಸದಸ್ಯರು ಕಾಂಗ್ರೆಸ್ ಮುಖಂಡರು ಹಾಗೂ ಸ್ಥಳೀಯ ಭಾಗವಹಿಸಿದ್ದರು.


ವರದಿ ✍️ಸೂರಿ ಬಣಕಲ್