ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆ ಮಕ್ಕಳಿಂದ ಉತ್ತಮ ಸಾಧನೆ

ದಿನಾಂಕ:12:09:2026ರಂದು ನಡೆದ ತಾಲ್ಲೂಕು ಮಟ್ಟದ 14ವರ್ಷ ವಯೋಮಿತಿಯೊಳಗಿನ ಕ್ರೀಡಾಕೂಟದಲ್ಲಿ ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆ (ರಿ) ಬಣಕಲ್ ನ ಬಾಲಕರ ವಿಭಾಗದ ಕಬಡ್ಡಿ ಮತ್ತು ಥ್ರೋಬಾಲ್ ನಲ್ಲಿ ಪ್ರಥಮ ಸ್ಥಾನ ಮತ್ತು ಬಾಲ್ ಬ್ಯಾಡ್ಮಿಂಟನ್ ನಲ್ಲಿ ದ್ವಿತೀಯ ಹಾಗೂ ಶಾಲೆಯ ಶ್ರೇಯಸ್ ಎಂಬ ವಿದ್ಯಾರ್ಥಿ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಬಾಲಕರ ವಿಭಾಗದಲ್ಲಿ ಕಬಡ್ಡಿ ಮತ್ತು ಥ್ರೋಬಾಲ್ ನಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಸದಸ್ಯರು ಪೋಷಕರು ಅಭಿನಂದಿಸಿದ್ದಾರೆ.