ಬಣಕಲ್ : ಇಂದು ಬಣಕಲ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕಾನೂನು ಸೇವ ಪ್ರಾಧಿಕಾರ ಚಿಕ್ಕಮಗಳೂರು , ವಕೀಲರ ಸಂಘ ಮೂಡಿಗೆರೆ ಹಾಗೂ “ಹಳೆಯ ವಿದ್ಯಾರ್ಥಿಗಳ ಸಂಘ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಬಣಕಲ್ “ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ನಡೆಯಿತು.
ಸಮಾಜದಲ್ಲಿ ಕಾನೂನಿನ ಅರಿವು ಹೆಚ್ಚಿಸುವುದು, ನಾಗರಿಕರ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಬಾಲ್ಯಾ ವಿವಾಹದಂತಹ ಸಾಮಾಜಿಕ ಪಿಡುಗುಗಳನ್ನು ತೊಲಗಿಸುವುದು ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರು ದೌರ್ಜನ್ಯಇಂತಹ ಕಾರ್ಯಕ್ರಮಗಳ ಪ್ರಮುಖ ಉದ್ದೇಶವಾಗಿದೆ.
ಕಾನೂನು ಅರಿವು ಎನ್ನುವುದು ಕೇವಲ ನ್ಯಾಯ ಪಡೆಯುವ ಸಾಧನವಲ್ಲ, ಉತ್ತಮ ಸಮಾಜ ನಿರ್ಮಾಣದ ಬುನಾದಿಯಾಗಿದೆ. ಪ್ರತಿಯೊಬ್ಬ ನಾಗರಿಕರು ಕಾನೂನಿನ ಬಗ್ಗೆ ತಿಳಿದುಕೊಂಡಾಗ ಮಾತ್ರ ನ್ಯಾಯ, ಸಮಾನತೆ ಮತ್ತು ಸಾಮಾಜಿಕ ಹೊಣೆಗಾರಿಕೆಗಳು ಬಲಗೊಳ್ಳುತ್ತವೆ.
ಈ ಕಾರ್ಯಕ್ರಮದಲ್ಲಿ ಶ್ರೀ ವಿ.ಹನುಮಂತಪ್ಪ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಚಿಕ್ಕಮಗಳೂರು
ಶ್ರೀ ಯೋಗೇಶ .ಎಂ.ಆರ್.ಪ್ರಾಧನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ಹಾಗೂ ಸದಸ್ಯ ಕಾರ್ಯದರ್ಶಿಗಳು ತಾಲ್ಲೂಕು ಕಾನೂನು ಸೇವಾ ಸಮಿತಿ ಮೂಡಿಗೆರೆ ಹಾಗೂ ಶ್ರೀ ಹೆಚ್.ಕೆ ರಘು ಅಧ್ಯಕ್ಷರು ವಕೀಲರ ಸಂಘ ಮೂಡಿಗೆರೆ ಹಾಗೂ ಶ್ರೀ ಉದಯ ಪ್ರಸಾದ್ ಎನ್ ಜೆ. ವಕೀಲರು ಮೂಡಿಗೆರೆ ಇವರು ಕಾನೂನಿನ ಬಗ್ಗೆ ಅರಿವು ನೀಡಿದರು
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು, sdmc ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ