ತಾಲ್ಲೂಕು ಮಟ್ಟದ ಚೆಸ್ ಕ್ರೀಡಾಕೂಟ :ಮೂಡಿಗೆರೆ ನಳಂದ ಕಾಲೇಜು ವಿದ್ಯಾರ್ಥಿ ಪ್ರತೀಕ್ ಜಿಲ್ಲಾ ಮಟ್ಟಕ್ಕೆ ಆಯ್ಕೆ


ಬಣಕಲ್ :ದಿನಾಂಕ 08/09/2026 ರಂದು ನಡೆದ ಮೂಡಿಗೆರೆ ಮತ್ತು ಕಳಸ ತಾಲ್ಲೂಕು ಮಟ್ಟದ ಕಾಲೇಜು ವಿಧ್ಯಾರ್ಥಿಗಳ ಚದುರಂಗ ( ಚೆಸ್ )ಕ್ರೀಡಾಕೂಟದ ಸ್ಪರ್ಧೆಯಲ್ಲಿ ನಳಂದ ಕಾಲೇಜು ವಿದ್ಯಾರ್ಥಿ ಪ್ರತೀಕ್ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಯ ಸಾಧನೆಗೆ ಕಾಲೇಜು ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದೆ. ಪ್ರತೀಕ್ .ಪಿ ಮುಂದಿನ ಜಿಲ್ಲಾ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲಿಯೂ ಉತ್ತಮ ಸಾಧನೆ ತೋರಿ ಕಾಲೇಜಿಗೆ ಕೀರ್ತಿಯನ್ನು ತರಲಿ ಎಂದು ಶುಭ ಹಾರೈಸಿದ್ದಾರೆ.


ವರದಿ ✍️ಸೂರಿ ಬಣಕಲ್