ಅಟೊ ಮತ್ತು ಟ್ಯಾಕ್ಸಿ ಚಾಲಕರಿಗೆ ರಕ್ಷಾ ಫೌಂಡೇಶನ್ ಸಂಸ್ಥಾಪಕರಾದ ಸುಷ್ಮಾ(ವಿಭಾ)ಇವರಿಂದ ಚಾಲಕರಕ್ಷಾ ವಿಮೆ ಅರ್ಜಿ ವಿತರಣೆ

ಬಣಕಲ್: ರಕ್ಷಾ ಫೌಂಡೇಶನ್ ಸಂಸ್ಥಾಪಕಿ,ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಕುಮಾರಿ ಸುಷ್ಮಾ ರವರು ಇದೇ ತಿಂಗಳ 17ನೇ ತಾರೀಕು ನಡೆಯಲಿರುವ ನಮೋತ್ಸವ ಕಾರ್ಯಕ್ರಮದ ಅಂಗವಾಗಿ ಚಾಲಕ ರಕ್ಷಾ ವಿಮೆ ವಿತರಣ ಅಡಿಯಲ್ಲಿ ದಿನಾಂಕ 6/9/2026 ರಂದು ಬಣಕಲ್ ಹೋಬಳಿಯ ಶ್ರೀ ಮಹಮ್ಮಾಯಿ ದುರ್ಗಾಪರಮೇಶ್ವರಿ ದೇವಾಲಯದ ಆವರಣದಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಚಾಲಕರಕ್ಷಾ ವಿಮೆ ಅರ್ಜಿಯನ್ನು ವಿತರಿಸಿ ಎಲ್ಲರನ್ನೂ ನಮೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾರ್ವಜನಿಕರನ್ನು ಸುರಕ್ಷಿತವಾಗಿ ಅವರವರ ಸ್ಥಳಕ್ಕೆ ತಲುಪಿಸುವ ನೀವು ನಿಜವಾದ ಸಮಾಜ ಸೇವಕರು, ನಿಮ್ಮೆಲ್ಲರ ಜೀವಕ್ಕೆ ರಕ್ಷೆಯಾಗಿ ಈ ವಿಮೆ ಕಾರ್ಯನಿರ್ವಹಿಸುತ್ತದೆ, ನಿಮ್ಮೆಲ್ಲರ ಸೇವೆ ಮಾಡಲು ನನಗೆ ಇದೊಂದು ಚಿಕ್ಕ ಅವಕಾಶ, ಇದಕ್ಕಾಗಿ ಯಾವುದೆ ರೀತಿಯ ಶುಲ್ಕ ಕೊಡುವ ಅವಶ್ಯಕತೆ ಇಲ್ಲಾ ನಾನು ಹಾಗೂ ನಮ್ಮ ಸಂಸ್ಥೆ ಇರುವಷ್ಟು ದಿನ ಎಲ್ಲವನ್ನು ನಾವೆ ಕಟ್ಟುತ್ತೇವೆ, ಇದನ್ನು ಸದುಪಯೋಗ ಪಡೆದುಕ್ಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಬಣಕಲ್ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಯತೀಶ್ ಕೂಡಹಳ್ಳಿ, ಕಾರ್ಯದರ್ಶಿ ಅರುಣ್ ಪೂಜಾರಿ ಹಾಗೂ ಆಟೊ ಮತ್ತು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ಹಾಜರಿದ್ದರು.