ಚಿಕ್ಕಮಗಳೂರು ಜಿಲ್ಲಾ ಅಂಡರ್-16 (U16) ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಶಿವಮೊಗ್ಗ ವಲಯದ ಅಡಿಯಲ್ಲಿ ನಡೆಸಲಾಯಿತು.

ಆಯ್ಕೆ ಪ್ರಕ್ರಿಯೆಯಲ್ಲಿ ಬಣಕಲ್ ನ ಮಹಮ್ಮದ್ ರಾಹಿಲ್ ಅವರು ಜಿಲ್ಲಾ ತಂಡಕ್ಕೆ ಆಯ್ಕೆಯಾಗುವುದರ ಮೂಲಕ ಗಮನ ಸೇಳಿದಿದ್ದಾರೆ.

ರಾಹಿಲ್ ಬಣಕಲ್ ಬದ್ರಿಯಾ ಹೋಟೆಲ್ ಮಾಲೀಕ ಲತಿಫ್ ಅವರ ಪುತ್ರ.ಮಗನ ಸಾಧನೆಗೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಕ್ರಿಯೆಯಲ್ಲಿ ಆಯ್ಕೆಯಾದ ಚಿಕ್ಕಮಗಳೂರು ತಂಡದ ಆಟಗಾರರು ಶಿವಮೊಗ್ಗ, ಹಾಸನ ಮುಂತಾದ ತಂಡಗಳ ವಿರುದ್ಧ ಕೆಎಸ್ಸಿಎ ಅಂತರ ಜಿಲ್ಲಾ ಟೂರ್ನಿಯಲ್ಲಿ ಆಡುತ್ತಾರೆ.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ