ಬಣಕಲ್ ಪೊಲೀಸ್ ಠಾಣೆ ವತಿಯಿಂದ ಟ್ರಿನಿಟಿ ಸ್ವಯಂ ಪ್ರೇರಿತ ರಕ್ತ ನಿಧಿ ಕೇಂದ್ರ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಯಶಸ್ವಿಯಾಗಿ ನೆರವೇರಿತು.
ಸಾಮಾಜಿಕ ಕಳಕಳಿಯೊಂದಿಗೆ ಆಯೋಜಿಸಲಾದ ಈ ಶಿಬಿರದಲ್ಲಿ ಟ್ರಿನಿಟಿ ಸಂಸ್ಥೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.
ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಅಗತ್ಯವಿರುವ ರೋಗಿಗಳ ಜೀವ ಉಳಿಸುವ ಉದ್ದೇಶದಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ರಕ್ತದಾನ ಮಾಡಿದ ಎಲ್ಲ ದಾನಿಗಳು, ವೈದ್ಯಕೀಯ ತಂಡ, ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಬಣಕಲ್ ಠಾಣಾ ಪಿ ಎಸ್ ದಿಲೀಪ್ ಕುಮಾರ್ ಕೃತಜ್ಞತೆ ಸಲ್ಲಿಸಿದರು.
ರಕ್ತದಾನ ಶಿಬಿರವನ್ನು ಮೊದಲ ಬಾರಿಗೆ ಠಾಣೆಯಲ್ಲಿ ಆಯೋಜನೆ ಮಾಡಿರುವುದರ ಬಗ್ಗೆ ಮಾತನಾಡಿದ ಪಿ.ಎಸ್.ಐ ದಿಲೀಪ್ ಕುಮಾರ್ ನನ್ನ ಅಮ್ಮನ ರಕ್ಷಣೆಗಾಗಿ ನಾವು ಪಟ್ಟ ಕಷ್ಟ ನಿಜಕ್ಕೂ ಬಹಳ ನೋವಿನ ಸಂಗತಿ. ತುರ್ತು ಸಂದರ್ಭದಲ್ಲಿ ರಕ್ತ ಸಿಗದೆ ಪರದಾಡುವುದು ದೊಡ್ಡ ಸಂಕಟ.ಅಮ್ಮನಿಗೆ ಆದ ಕಷ್ಟದ ಅಥವಾ ಸ್ಫೂರ್ತಿದಾಯಕ ಅನುಭವವೇ ರಕ್ತದಾನ ಶಿಬಿರವನ್ನು ಆಯೋಜಿಸಲು ಪ್ರೇರಣೆಯಾಯಿತು ಭವಿಷ್ಯದಲ್ಲಿ ಇಂತಹ ಕಷ್ಟ ಯಾರಿಗೂ ಬಾರದಂತೆ ತಡೆಯಲು ನಾವು ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಸಣ್ಣ ಕೆಲಸ ಮಾಡಿದ್ದೇವೆ ಎಂದರು.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ