ಬಣಕಲ್ ಪೊಲೀಸರ ಕಾರ್ಯಾಚರಣೆ ಐವರು ಶಂಕಿತ ಬಾಂಗ್ಲಾ ಪ್ರಜೆಗಳ ಪತ್ತೆ

ಕಟ್ಟಡ ನಿರ್ಮಾಣ ಕಾಮಗಾರಿಯ ಕಾರ್ಮಿಕರ ಸೋಗಿನಲ್ಲಿ ನೆಲೆಸಿದ್ದ 5 ಮಂದಿ ಬಾಂಗ್ಲಾದೇಶ ಪ್ರಜೆಗಳನ್ನು ಬಣಕಲ್ ಠಾಣಾ ಪೊಲೀಸರು ಗೋಣಿಬೀಡು ಜನ್ನಾಪುರದಲ್ಲಿ ಬಂಧಿಸಿ ಕರೆತಂದಿದ್ದಾರೆ .

ಬಾಂಗ್ಲಾದೇಶದ ರಾಜಶಾಯಿ ಜಿಲ್ಲೆಯ ನಿವಾಸಿಗಳಾದ ಜಹಾಂಗೀರ್, ಫೈಜುದ್ದಿನ್, ನುಮಾನ್ ಬಶೀರ್,ಮಹಮ್ಮದ್ ಹುಮೈನ್, ಮಹಮ್ಮದ್ ಹಸೀಬುಲ್, ಎಂಬುವರನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಬಣಕಲ್ ಸಮೀಪ ಕಟ್ಟಡ ನಿರ್ಮಾಣ ಕೆಲಸ ಮಾಡಿಕೊಂಡಿದ್ದರು ಜನ್ನಾಪುರದಲ್ಲಿ ವಾಸಮಾಡುತ್ತಿದ್ದರು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ದಾಖಲಾತಿ ಪರಿಶೀಲಿಸಿದ ವೇಳೆ 5 ಮಂದಿ ಕಾರ್ಮಿಕರು ಅಕ್ರಮವಾಗಿ ವಾಸವಿದ್ದ ಬಾಂಗ್ಲಾದೇಶದ ನಿವಾಸಿಗಳೆಂದು ಬೆಳಕಿಗೆ ಬಂದಿದೆ.

ಬಾಂಗ್ಲಾ ಪ್ರಜೆಗಳನ್ನು ಠಾಣೆಗೆ ಕರೆತಂದು ಕೂಲಂಕುಷವಾಗಿ ಪರಿಶೀಲನೆ ಮಾಡಿ ಅವರ ಗುರುತಿನ ಚೀಟಿಯಾದ ನ್ಯಾಷನಲ್ ಐಡಿ ಕಾರ್ಡ್, ಜನನ ಪ್ರಮಾಣ ಪತ್ರ ಹಾಗೂ ಅವರ ಕುಟುಂಬದವರ ದಾಖಲಾತಿಗಳನ್ನು ಪರಿಶೀಲಿಸಿದಾಗ ಅವರು ಬಾಂಗ್ಲಾದೇಶ ನಿವಾಸಿಗಳೆಂದು ದೃಢಪಟ್ಟಿರುತ್ತದೆ. ಅವರು ಇಲ್ಲಿಗೆ ಕೂಲಿ ಕೆಲಸವನ್ನು ಮಾಡಲು ಬಂದಿದ್ದರು. ಬಾಂಗ್ಲಾದೇಶ ನಿವಾಸಿಗಳು ಯಾವುದೇ ರಹದಾರಿ ಪತ್ರ, ವೀಸಾ ಪಡೆಯದೆ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದಾರೆ ಎಂದು ಪಿ ಎಸ್ ಐ ದಿಲೀಪ್ ಕುಮಾರ್ ತಿಳಿಸಿದ್ದಾರೆ.