ಬಣಕಲ್ :ಬೇಸಿಗೆಯ ರಜೆಯ ದಿನಗಳನ್ನು ಖುಷಿಯಿಂದ ಕಳೆದು ಮತ್ತೆ ಶಾಲೆಯತ್ತ ಹೆಜ್ಜೆ ಹಾಕಿದ ಚಿಣ್ಣರಿಗೆ ಬಣಕಲ್ ರಿವರ್ ವ್ಯೂ ಶಾಲೆಯಲ್ಲಿ ಶಿಕ್ಷಕರು ಹೃದಯ ಸ್ಪರ್ಶಿ ಸ್ವಾಗತ ನೀಡಿದರು.
ಶಾಲೆಯ ಮುಖ್ಯ ದ್ವಾರವನ್ನು ಬಲೂನ್ ನಿಂದ ಸಿಂಗರಿಸಿ ಮಕ್ಕಳಿಗೆ ಆತ್ಮೀಯವಾಗಿ ಬರಮಾಡಿಕೊಂಡರು. ಶಾಲೆಯ ಪ್ರವೇಶ ಭಾಗದಲ್ಲಿ ಮಕ್ಕಳಿಗೆ ಸಿಹಿ ತಿನಿಸು ನೀಡಿ ಆತ್ಮೀಯವಾಗಿ ಬರಮಾಡಿಕೊಂಡ ದೃಶ್ಯ ಕಂಡು ಬಂತು. ಶಾಲೆಯಲ್ಲಿ ಹಬ್ಬದ ಸಂಭ್ರಮದ ದೃಶ್ಯವಿತ್ತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು. ಶಿಕ್ಷಕ ವೃಂದ ಶಾಲೆಯ ನಿರ್ದೇಶಕರು ಹಾಜರಿದ್ದು ಮಕ್ಕಳಿಗೆ ಉತ್ಸಾಹ ತುಂಬಿದರು.
ವರದಿ ✍️ಸೂರಿ ಬಣಕಲ್