ಬಣಕಲ್ ನಲ್ಲಿ ಸಂಭ್ರಮದ ಈದ್-ಉಲ್-ಫಿತರ್ ಆಚರಣೆ

ಬಣಕಲ್: ಮಂಗಳವಾರ ಶವ್ವಾಲ್ ಚಂದ್ರ ದರ್ಶನದ ನಂತರ ಇಂದು (ಬುಧವಾರ) ಈದ್ ಉಲ್ ಫಿತರ್ ಹಬ್ಬದ ಘೋಷಣೆಯಾಗಿತ್ತು.

ಮುಸ್ಲಿಂ ಬಾಂಧವರು ಇಂದು ಬಣಕಲ್ ನಲ್ಲಿ ಸಂಭ್ರಮದ ಈದ್ ಉಲ್ ಫಿತರ್ ಆಚರಣೆ ನಡೆಸಿದರು. ಚಂದ್ರ ದರ್ಶನದ ನಂತರ ಬಡವರಿಗೆ ಫಿತ್ರ್ ಝಕಾತ್ ಹಂಚಿದ ಮುಸ್ಲಿಮ್ ಬಾಂಧವರು ಇಂದು ಬುಧವಾರ ಮಸೀದಿ/ಈದ್ಗಾಗಳಿಗೆ ಹೊಸ ಉಡುಪಿ ಧರಿಸಿ ಬಂದು ಈದ್ ನಮಾಝ್ ನಿರ್ವಹಿಸಿದರು. ನಮಾಝಿನ ನಂತರ ಮಸೀದಿ/ಈದ್ಗಾಗಳಲ್ಲಿ ಖುತ್ಬಾ (ಪ್ರಭಾಷಣ) ನೆರೆವೇರಿತು. ನಂತರ ಹಿರಿಯರು, ಕಿರಿಯರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ದೃಶ್ಯಗಳು ಕಂಡು ಬಂತು.

ರಂಝಾನಿನ ಒಂದು ತಿಂಗಳ ಉಪವಾಸದ ನಂತರ ಈದ್ ಉಲ್ ಫಿತರ್ ಹಬ್ಬವನ್ನು ಮುಸ್ಲಿಮರು ಆಚರಿಸುತ್ತಾರೆ. ಇದನ್ನು ದಾನ ಧರ್ಮಗಳ ಹಬ್ಬವೆಂದು ಕರೆಯಲಾಗುತ್ತದೆ.

ವರದಿ :✍️ಸೂರಿ ಬಣಕಲ್