ಬಣಕಲ್ ಗ್ರಾಮ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಜುಳ ರವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ


ಬಣಕಲ್ :ಕಳೆದ ಹದಿನೈದು ವರ್ಷಗಳಿಂದ ಬಣಕಲ್ ಗ್ರಾಮ ಪಂಚಾಯಿತಿಯಲ್ಲಿ ಗುಮಸ್ಥೆಯಾಗಿ ಸೇವೆ ಸಲ್ಲಿಸುತಿದ್ದ ಮಂಜುಳ ರವರು ದ್ವಿತೀಯ ದರ್ಜೆ ಲೆಕ್ಕಸಹಾಯಕಿ ಹುದ್ದೆಗೆ ಬಡ್ತಿ ಹೊಂದಿರುವುದರಿಂದ ಇಂದು ಬಣಕಲ್ ಗ್ರಾಮ ಪಂಚಾಯಿತಿ ವತಿಯಿಂದ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಿ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಂಜುಳ ರವರು ಇಷ್ಟು ವರ್ಷ ಬಣಕಲ್ ನಲ್ಲಿ ಸೇವೆ ಸಲ್ಲಿಸಲು ಸಹಕರಿಸಿದ ಬಣಕಲ್ ಜನತೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು ಇದೆ ರೀತಿ ತಮ್ಮ ಸಹಕಾರ ಆಶೀರ್ವಾದ ಮುಂದೆಯೂ ಈಗೆ ಮುಂದುವರಿಯಲಿ ಎಂದರು,ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು. ಗ್ರಾಮ ಪಂಚಾಯಿತಿ ಪಿ,ಡಿ,ಓ, . ಸಿಬ್ಬಂದಿಗಳು ಹಾಜರಿದ್ದರು .