ಬಣಕಲ್ : ಶ್ರಮಜೀವಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘ ಬಣಕಲ್ ಇವರ ವತಿಯಿಂದ ಆಟೋ ಚಾಲಕರು ಹಾಗೂ ಮಾಲೀಕರಿಗಾಗಿ ಮೊದಲವರ್ಷದ ಕ್ರಿಕೆಟ್ ಲೀಗ್ ಪಂದ್ಯಾವಳಿಯನ್ನು ಬಣಕಲ್ ನಲ್ಲಿ ಆಯೋಜನೆ ಮಾಡಲಾಗಿತ್ತು.ಬೆಳಗ್ಗೆ 10ಗಂಟೆಗೆ ಬಣಕಲ್ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಲೀಗ್ ಕ್ರಿಕೆಟ್ ಪಂದ್ಯಾವಳಿ ಪ್ರಾರಂಭವಾಗಿತ್ತು.
ಒಂದು ದಿನದ ಮಟ್ಟಿಗೆ ಆಟೋ ಚಾಲಕರು ತಮ್ಮ ದೈನಂದಿನ ಒತ್ತಡವನ್ನು ಮರೆತು ಪಂದ್ಯದಲ್ಲಿ ಭಾಗವಹಿಸಿ ಸಂತಸ ಪಟ್ಟರು. ಈ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಶ್ರಮಜೀವಿ ರೆಡ್ ಚಾಲೆಂಜರ್ಸ್ ಹಾಗೂ ದ್ವಿತೀಯ ಸ್ಥಾನವನ್ನು ಶ್ರಮಜೀವಿ ಎಲ್ಲೊ ಆರ್ಮಿಸ್ ಪಡೆದುಕೊಂಡರು.
ವರದಿ✍️ಸೂರಿ ಬಣಕಲ್