ಬಣಕಲ್ : ಕೋಳಿ ಜುಜಾಟ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬಕ್ಕಿ ಗ್ರಾಮದ ರಾಮಚಂದ್ರ ಎಂಬುವವರ ಮನೆಯ ಪಕ್ಕದಲ್ಲಿರುವ ತೆರೆದ ಶೆಡ್ ನಲ್ಲಿ ಅಕ್ರಮವಾಗಿ ಜುಜಾಟ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಲಾಗಿದೆ.
ಹಣ.ಕೋಳಿಗಳನ್ನು ಪಣಕ್ಕಿಟ್ಟು ಜುಜಾಟವಾಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿದ ಪೊಲೀಸರು 5400 ನಗದು ಹಣದೊಂದಿಗೆ ಜುಜಾಟ ನಡೆಸುತ್ತಿದ್ದ ಆರೋಪಿಗಳ ಸಹಿತ ಕೋಳಿ.ಕತ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಘಟನೆ ಸಂಬಂಧ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.