ಮೂಡಿಗೆರೆ :ಈಗಿನ ಕಾಲದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಎಂದರೆ ಪ್ರತಿ ತಿಂಗಳು ಗ್ರಾಮಸಭೆಗೆ ಬರುವುದು ಕಾಫಿ ಬಿಸ್ಕೆಟ್ ತಿನ್ನೋದು ಹೇಳಿದಲ್ಲಿ ಸಹಿ ಮಾಡೋದು ವಾಪಸ್ ಮನೆಗೆ ಹೋಗುವುದು ಇದು ಸಾರ್ವಜನಿಕ ವಲಯದಲ್ಲಿ ಇರುವ ಅಭಿಪ್ರಾಯ .ಆದರೆ ಹೀಗೂ ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ನಿಡುವಾಳೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ನವೀನ್ ಹಾವಳಿ ಅವರು ತನ್ನ ಗ್ರಾಮಕ್ಕೆ ಬೀದಿ ದೀಪಗಳು ಇಲ್ಲದೆ ಗ್ರಾಮಸ್ಥರು ಪಡುತ್ತಿರುವ ಸಮಸ್ಯೆಗೆ ತಾನೇ ವಿದ್ಯುತ್ ಕಂಬ ಏರಿ ವಿದ್ಯುತ್ ದೀಪಗಳನ್ನು ಅಳವಡಿಕೆ ಮಾಡಿದ ಪ್ರಸಂಗ ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ,ಉಪಾಧ್ಯಕ್ಷ ನವೀನ ಹಾವಳಿ ಅವರ ಕಾರ್ಯಕ್ಕೆ ಜನ ಭೇಷ್ ಎಂದಿದ್ದಾರೆ.
ನಿಡುವಾಳೆ ಗ್ರಾಮ ಪಂಚಾಯಿತಿಯ ತನ್ನ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಬೀದಿ ದೀಪಗಳು ಇಲ್ಲದೆ ಜನ ಸಮಸ್ಯೆ ಎದುರಿಸುತಿದ್ದರು. ಬೀದಿ ದೀಪ ಅಳವಡಿಕೆ ಸಂಬಂದ ಗ್ರಾಮ ಪಂಚಾಯಿತಿ ವತಿಯಿಂದ ಟೆಂಡರ್ ಕರೆದರೂ ಸಹ ಯಾರು ಮುಂದೆ ಬಂದಿರಲಿಲ್ಲ ಬೀದಿ ದೀಪಗಳು ಉರಿಯದೆ ಜನ ರಾತ್ರಿ ಸಮಯದಲ್ಲಿ ಓಡಾಡುವುದು ಕಷ್ಟಕರವಾಗಿದೆ ಅಲ್ಲದೆ ಮಹಿಳೆಯರು ಒಬ್ಬಂಟಿಗರಾಗಿ ಸಂಜೆ ಸಮಯದಲ್ಲಿ ರಸ್ತೆಯಲ್ಲಿ ಓಡಾಡಲು ಭಯಪಡುತ್ತಾರೆ. ಬೀದಿ ದೀಪಗಳು ಇಲ್ಲದ ಕಾರಣ ಕಳ್ಳಕಾಕಾರಿಗೆ ಕಳವು ಮಾಡಲು ಒಳ್ಳೆಯ ಸಂದರ್ಭ ದೊರಕಿಸಿದಂತಾಗಿದೆ. ಇದರಿಂದ ಗ್ರಾಮಸ್ಥರು ಪಡುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಸ್ವತಃ ತಾನೇಫೀಲ್ಡ್ ಗೆ ಇಳಿದು ಗ್ರಾಮಸ್ಥರ ಸಹಕಾರದೊಂದಿಗೆ ವಿದ್ಯುತ್ ಕಂಬ ಏರಿ ಬೀದಿ ದೀಪ ಅಳವಡಿಸಿದ್ದಾರೆ,
ಉಪಾಧ್ಯಕ್ಷರ ಈ ಕಾರ್ಯಕ್ಕೆ ಗ್ರಾಮಸ್ಥರು ಕೂಡ ಕೈ ಜೋಡಿಸಿ ಬೀದಿ ದೀಪ ಬೆಳಗಿಸಿ ಸಂತೋಷ ವ್ಯಕ್ತ ಪಡಿಸಿದ್ದಾರೆ
ಗ್ರಾಮದ ಜನರ ಅನುಕೂಲಕ್ಕಾಗಿ ಗ್ರಾಮ ಪಂಚಾಯಿತಿ ವತಿಯಿಂದ ಬೀದಿ ದೀಪಗಳನ್ನು ಅಳವಡಿಲಾಗಿದೆ ಆದರೆ ಕಳೆದ ವರ್ಷವೆ ಬೀದಿ ದೀಪಗಳನ್ನು ತಂದು ಇಡಲಾಗಿದೆ ಆದರೆ ಯಾರೊಬ್ಬರೂ ಅಳವಡಿಸಲು ಮುಂದೆ ಬಾರದ ಕಾರಣ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ದೀಪಗಳು ಹೆಸರಿಗೆ ಮಾತ್ರ ಆದರೆ ನಿರ್ವಹಣೆ ಕಾರ್ಯಕ್ಕೆ ಯಾವ ಗುತ್ತಿಗೆದಾರರು ಮುಂದೆ ಬರುತ್ತಿಲ್ಲ ಇದರಿಂದ ರೋಸಿ ಹೋದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯಾರನ್ನೂ ಕಾಯದೆ ಗ್ರಾಮಸ್ಥರ ಸಹಾಯದಿಂದ ಗ್ರಾಮದ ಸುತ್ತ ಇರುವ ಕಂಬಗಳಿಗೆ ತಾನೇ ಕಂಬ ಹತ್ತಿ ಬೀದಿ ದೀಪ ಅಳವಡಿಕೆ ಮಾಡಿ ಮಾದರಿಯಾಗಿದ್ದಾರೆ.
