ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ‘ಅತ್ಯುತ್ತಮ ರೈತ ಮಹಿಳೆ’ ಪ್ರಶಸ್ತಿ ಪಡೆದ ವನಶ್ರೀ ಗೌಡ ಅವರಿಗೆ ಸನ್ಮಾನ


ಬಣಕಲ್ :ಇಂದು ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಉತ್ತಮ ರೈತ ಮಹಿಳೆ ಪ್ರಶಸ್ತಿ ಪಡೆದ ವನಶ್ರೀ ಗೌಡ ಅವರಿಗೆ ಬಣಕಲ್ ಫ್ರೆಂಡ್ಸ್ ಕ್ಲಬ್ ಸದಸ್ಯರು ಅವರ ಸ್ವಗೃಹ ದಲ್ಲಿ ಸನ್ಮಾನಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಬಣಕಲ್ ಫ್ರೆಂಡ್ಸ್ ಕ್ಲಬ್ ನ ಗೌರವ ಅಧ್ಯಕ್ಷರಾದ ಪ್ರವೀಣ್ ಗೌಡ ಪರಿಶ್ರಮಪಟ್ಟರೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ ಎಂಬುದಕ್ಕೆ ವನಶ್ರೀ ಲಕ್ಷ್ಮಣ್ ಗೌಡ ಅವರು ಪ್ರೇರಣೆಯಾಗಿದ್ದಾರೆ.ರೈತ ಸಂಘದ ರಾಜ್ಯ ಮಹಿಳಾ ಉಪಾಧ್ಯಕ್ಷೆಯಾಗಿರುವ ಜಿ. ಆರ್. ವನಶ್ರೀ ಲಕ್ಷ್ಮಣ್ ಗೌಡ ಅವರ ಉತ್ತಮ ಕೃಷಿಯನ್ನು ಪರಿಗಣಿಸಿ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕ ವಿಜ್ಞಾನಗಳ ವಿಶ್ವ ವಿದ್ಯಾಲಯ ನೀಡುವ ಪ್ರಶಸ್ತಿ ಅವರಿಗೆ ಸಂದಿರುವುದು ನಿಜಕ್ಕೂ ಶ್ಲಾಘನೀಯ ಎಂದರು .
ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಅರುಣ್ ಪೂಜಾರಿ ಮಾತನಾಡಿ
ಬರಡು ಭೂಮಿಯಾಗಿದ್ದ ಭೂಮಿಯನ್ನು ವನಶ್ರೀ ಅವರು ಫಲವತ್ತಾದ ನೆಲವಾಗಿ ಬದಲಾಯಿಸಿದ್ದಾರೆ,ಇದೀಗ ಆ ಭೂಮಿಯಲ್ಲಿ ಹಲವು ಬೆಳೆಗಳನ್ನು ಬೆಳೆಯುತ್ತಿದ್ದಾರೆ ಕೃಷಿ ಬಗ್ಗೆ ಅವರಿಗೆ ಇರುವ ಕಾಳಜಿ ಓರ್ವ ಮಹಿಳೆ ಯಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದನ್ನು ಗುರುತಿಸಿ ಅವರಿಗೆ ಅತ್ಯುತ್ತಮ ರೈತ ಪ್ರಶಸ್ತಿ ದೊರಕಿರುವುದು ಸ್ವಾಗತರ್ಹ ಎಂದರು ಈ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬ್ ನ ಸದಸ್ಯರಾದ ನಿಶಾಂತ್. ಸೂರಿ. ಕಿರಣ್. ಉತ್ತಮ್ ಅಶೋಕ್. ರಂಗನಾಥ್. ಅಣ್ಣು. ವಿಕ್ಕಿ. ಹಾಜರಿದ್ದರು