ಬೇಕಾ ಬಿಟ್ಟಿ ನಿಯಮ ಉಲ್ಲಂಘಸಿ ವಾಹನ ನಿಲುಗಡೆ ಮಾಡಿದರೆ ದಂಡ ಫಿಕ್ಸ್ :ಬಣಕಲ್ ಠಾಣಾ ಪಿ ಎಸ್ ಐ ದಿಲೀಪ್ ಕುಮಾರ್ ಎಚ್ಚರಿಕೆ

ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯು ಪ್ರಮುಖ ರಸ್ತೆಗಳಲ್ಲಿ ‘ವಾಹನ ನಿಲುಗಡೆ ನಾಮ ಫಲಕವನ್ನು ಅಳವಡಿಸಿದೆ.

ಬಣಕಲ್ ನಲ್ಲಿ ಟ್ರಾಫಿಕ್ ಕಿರಿ ಕಿರಿ ತಪ್ಪಿಸಲು ಕೈಗೊಳ್ಳುತ್ತಿರುವ ಕ್ರಮಗಳು ಸಾರ್ವಜನಿಕ ವಲಯದಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಮಾತನಾಡಿದ ದಿಲೀಪ್ ಕುಮಾರ್ ಪಟ್ಟಣದ ಮುಖ್ಯ ರಸ್ತೆಗಳು, ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳು ಮತ್ತು ವಾಣಿಜ್ಯ ಮಳಿಗೆಗಳ ಎದುರು ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿರುವುದನ್ನು ತಡೆಯಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.


ನಿರ್ದಿಷ್ಟಪಡಿಸಿದ ರಸ್ತೆಗಳ ಬದಿಗಳಲ್ಲಿ “ವಾಹನ ನಿಲುಗಡೆ ಪಾರ್ಕಿಂಗ್” ಬೋರ್ಡ್‌ಗಳನ್ನು ಅಳವಡಿಸಲಾಗಿದ್ದು ನಾಲ್ಕು ಚಕ್ರ ವಾಹನ ನಿಲುಗಡೆ ದಿನ ಭಾನುವಾರ, ಮಂಗಳವಾರ, ಗುರುವಾರ,ಶನಿವಾರ,
ದ್ವಿ ಚಕ್ರ ವಾಹನ ನಿಲುಗಡೆ ದಿನ ಸೋಮವಾರ, ಬುಧವಾರ, ಶುಕ್ರವಾರ,ನಿಗದಿ ಪಡಿಸಿದ ಬದಿಯಲ್ಲಿ ನಿಲ್ಲಿಸಬೇಕು ಎಂದರು.

ದಂಡ ವಿಧಿಸುವಿಕೆ: ನಿಯಮ ಉಲ್ಲಂಘಿಸಿ ವಲಯಗಳಲ್ಲಿ ಕಾರು ಅಥವಾ ಬೈಕ್‌ಗಳನ್ನು ಪಾರ್ಕ್ ಮಾಡಿದರೆ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಲಾಗುತ್ತದೆ.
ಪಟ್ಟಣಕ್ಕೆ ಬರುವ ಸಾರ್ವಜನಿಕರು ಮತ್ತು ಪ್ರವಾಸಿಗರು ಟ್ರಾಫಿಕ್ ಜ್ಯಾಮ್ ತಪ್ಪಿಸಲು ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳಲ್ಲೇ ವಾಹನಗಳನ್ನು ನಿಲುಗಡೆ ಮಾಡಬೇಕು ಎಂದು ಬಣಕಲ್ ಠಾಣಾ ಪಿ ಎಸ್ ಐ ದಿಲೀಪ್ ಕುಮಾರ್ ಮಾಹಿತಿ ನೀಡಿದ್ದಾರೆ.


ವರದಿ ✍️ಸೂರಿ ಬಣಕಲ್