ದಾರಿಯಲ್ಲಿ ಸಿಕ್ಕ ಪರ್ಸ್ ಹಿದಿರುಗಿಸಿ ಮಾನವೀಯತೆ ಮೆರೆದ ಮಹಿಳೆ

ಬಣಕಲ್: ದಾರಿಯಲ್ಲಿ ಸಿಕ್ಕ ಪರ್ಸನ್ನ ಸಂಬಂಧಪಟ್ಟವರಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದಿರುವ ಘಟನೆ ಬಣಕಲ್ ನಲ್ಲಿ ನಡೆದಿದೆ
ಬಣಕಲ್ ಪಟ್ಟಣದ ಸವಿತಾ ಮಧು ಎಂಬ ಗೃಹಿಣಿಗೆ ನಗರದ ರಸ್ತೆಯಲ್ಲಿ ಹೋಗುವಾಗ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪರ್ಸ್ ಸಿಕ್ಕಿತ್ತು. ದಾರಿ ಮಧ್ಯೆ ಸಿಕ್ಕ ಆ ಪರ್ಸಿನಲ್ಲಿ ನಗದು ಹಾಗೂ ಅಗತ್ಯ ದಾಖಲೆಗಳು ಇದ್ದವು.
ದಾರಿಯಲ್ಲಿ ಸಿಕ್ಕಿದ ನಗದು ಹಾಗೂ ಅಗತ್ಯ ದಾಖಲೆಗಳನ್ನ ಮರಳಿ ವಾರಸುದಾರರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಸಾವಿರಕ್ಕೂ ಹೆಚ್ಚು ನಗದು, ಪಾನ್ ಕಾರ್ಡ್, ಎಟಿಎಂ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇದ್ದವು. ಅದರಲ್ಲಿರುವ ವಿಳಾಸ ಪತ್ತೆ ಹಚ್ಚಿದ ಸವಿತಾ ಮಧುರವರು ದಾರಿಯಲ್ಲಿ ಸಿಕ್ಕ ಪರ್ಸ್ ಯಶೋದಮ್ಮ ಎಂಬುವರದ್ದು ಎಂದು ತಿಳಿದು ಬಂದಿದೆ.

ಆ ವಿಳಾಸವನ್ನ ಹುಡುಕಿ ಸಂಬಂಧಪಟ್ಟವರಿಗೆ ಪರ್ಸನ್ನ ಹಿಂದಿರುಗಿಸಿದ್ದಾರೆ. ಪರ್ಸ್ ಕಳೆದುಕೊಂಡಿದ್ದ ಯಶೋದಮ್ಮ ಪರ್ಸಿಗಾಗಿ ಹುಡುಕಾಟ ಆರಂಭಿಸಿದ್ದರು. ಕಳೆದ ರಾತ್ರಿ ತಾನೂ ಓಡಾಡಿದ ಜಾಗದಲ್ಲೆಲ್ಲಾ ಹುಡುಕಾಡಿದ್ದರು. ಆದರೆ, ಪರ್ಸ್ ಸಿಕ್ಕಿರಲಿಲ್ಲ. ಇಡೀ ರಾತ್ರಿ ಹುಡುಕಾಡಿದರೂ ಸಿಗದ ಪರ್ಸನ್ನ ಬೆಳಗ್ಗೆ ಸವಿತ ಮಧು ರವರು ತಿಳಿಸಿದ್ದಾಗ ಪರ್ಸ್ ಕಳೆದುಕೊಂಡ ಯಶೋದಮ್ಮ ಸಂತೋಷಗೊಂಡು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ