TV9 ಜಿಲ್ಲಾ ವರದಿಗಾರ ಪ್ರಶಾಂತ್ ಮುಗ್ರಹಳ್ಳಿ ಅವರಿಗೆ ಸನ್ಮಾನ

ಇತ್ತೀಚಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಾನ್ಯ ಮುಖ್ಯಮಂತ್ರಿಗಳು ನೀಡಿದ 2018ರಲ್ಲಿ ಮಡಿಕೇರಿಯಲ್ಲಿ ನಡೆದ ಪ್ರಕೃತಿಯ ಭೀಕರ ಪ್ರಕೃತಿ ವಿಕೋಪದ ಮಾನವಿಯತೆಯ ವರದಿಗಾಗಿ, ರಾಜ್ಯ ಪ್ರಶಸ್ತಿಗೆ ಭಾಜನರಾದ ಚಿಕ್ಕಮಗಳೂರು ಟಿವಿ9 ಜಿಲ್ಲಾ ವರದಿಗಾರರಾದ ಪ್ರಶಾಂತ್ ಮುಗ್ರಹಳ್ಳಿ ಅವರನ್ನು ಇಂದು ನಿಡುವಾಳೆ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಆಡಳಿತದಾರರಾದ ಶ್ರೀ ಸುನೀಲ್ ಜೆ ಗೌಡರಿಂದ ಸನ್ಮಾನಿಸಲಾಯಿತು,
ಈ ಸಂದರ್ಭದಲ್ಲಿ ವ್ಯವಸ್ಥಾಪಕರಾದ ನಾಗರಾಜ್ ಭಟ್, ಅರ್ಚಕರಾದ ಚರಣ್ ಭಟ್, ಸಿಬ್ಬಂದಿ ಸೂರ್ಯನಾರಾಯಣ, ಸ್ಥಳೀಯರಾದ ಸಂತೋಷ್ ಸಾಲಿಯನ್ , ಕೃಷ್ಣಪ್ಪ ಜಾವಳಿ, ಸಂತೋಷ್ ಅತ್ತಿಗೆರೆ, ತನು ಕೊಟ್ಟಿಗೆಹಾರ, ಬಿಜೆಪಿ ಮುಖಂಡರಾದ ಪರೀಕ್ಷಿತ್ ಜಾವಳಿ, ಸಂಜಯ್ ಕೊಟ್ಟಿಗೆಹಾರ,ಸಂದೀಪ್ ಕಲ್ಲಕ್ಕಿ ಈ ಸಂದರ್ಭದಲ್ಲಿ ಹಾಜರಿದ್ದರು.