ರಸ್ತೆಬದಿ ನಿಂತಿದ್ದ ಆನೆಯೊಂದು ಬೈಕ್ ಸವಾರನನ್ನು ಓಡಿಸಿಕೊಂಡು ಹೋಗಿದ್ದು, ವ್ಯಕ್ತಿ ಎದ್ನೋ ಬಿದ್ನೋ ಎಂದು ಓಡಿ ಜೀವ ಉಳಿಸಿಕೊಂಡ ಘಟನೆ ದೇವರ ಮನೆಯಲ್ಲಿ ನಡೆದಿದೆ.
ಇಂದು ಸಂಜೆ 4ಗಂಟೆ ಸಮಯದಲ್ಲಿ ದೇವರ ಮನೆಗೆಂದು ಹೋಗುತ್ತಿದ್ದ ಬೈಕ್ ಸವಾರ ಆನೆಯನ್ನು ಗಮನಿಸದೆ ಬೈಕ್ ಸವಾರ ತೆರಳಲು ಮುಂದಾಗಿದ್ದನು. ಈ ವೇಳೆ ಆನೆ ದಾಳಿ ಮಾಡಲು ಮುಂದಾಗಿದೆ. ಆಗ ಸವಾರ ಬೈಕ್ ಬಿಟ್ಟು ಓಡಿ ಹೋಗಿದ್ದಾನೆ. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಧಾವಿಸಿ ಪರಿಶೀಲಿಸಿದ್ದಾರೆ.
ಕೋಗಿಲೆ ಗ್ರಾಮಸ್ಥ ಸಜಿತ್ ಮಾತನಾಡಿ ಈ ಭಾಗದಲ್ಲಿ ಕಾಡು ಪ್ರಾಣಿಗಳು ರಸ್ತೆ ಪಕ್ಕದಲ್ಲೇ ಅಡ್ಡಾಡುವುದು ಸರ್ವೇಸಾಮಾನ್ಯ. ಪ್ರವಾಸಿಗರು ದೇವರಮನೆಗೆ ಸಂಜೆ ಸಮಯದಲ್ಲಿ ಬರುವುದನ್ನು ನಿಲ್ಲಿಸಬೇಕು ಕಾಡು ಪ್ರಾಣಿಗಳು ಆಹಾರವನ್ನು ಅರಸಿ ನಾಡಿಗೆ ಬರುವುದು ಕೇಳುತ್ತಿರುತ್ತೇವೆ ಆದರೆ ಈ ಭಾಗ ಮೊದಲೇ ಕಾಡು ಅದರಿಂದ ನಾವುಗಳೇ ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು ಎಂದರು.
*ವರದಿ :ಸೂರಿ ಬಣಕಲ್*