ಮೈ ನವೀರೆಳಿಸಿದ ರಿವರ್ಸ್ ಕಾರ್ ಮತ್ತು ಸ್ಲೋ ಬೈಕ್ ರ್ಯಾಲಿ

ಬಣಕಲ್ :ಅಮೃತ ಮಹೋತ್ಸವದ ಅಂಗವಾಗಿ ಮಲೆನಾಡಿನಲ್ಲಿ ಆಯೋಜಿಸಿದ್ದ ರಿವರ್ಸ್ ಕಾರ್ ರೇಸ್ ಸ್ಲೋ ಬೈಕ್ ರೇಸ್ ನೋಡುಗರ ಮನಸೂರೆಗೊಂಡಿತ್ತು. ಬಣಕಲ್ ಪ್ರೌಢ ಶಾಲೆಯಲ್ಲಿ ಭಾನುವಾರ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಿದ್ದರು ಮಹಿಳೆಯರಿಗೆ ಮ್ಯೂಸಿಕಲ್ ಚೇರ್ ಮಕ್ಕಳಿಗೆ 100ಮೀ ಓಟ ಹಾಗೆ ಕಾರ್ ಹಾಗೂ ಬೈಕ್ ಸ್ಲೋ ರೇಸ್ ಆಯೋಜನೆ ಮಾಡಿದ್ದರು.70ಕ್ಕೂ ಹೆಚ್ಚು ಕಾರುಗಳು ರಿವರ್ಸ್ ರ್ಯಾಲಿಯಲ್ಲಿ ಭಾಗವಹಿಸಿದ್ದವು,ದೂಳೆಬ್ಬಿಸುತ್ತಾ ಸಾಗಿದ ಪರಿ ಎದೆ ಝಲ್ಲೆನಿಸಿತು. ಅದರಲ್ಲೂ ರೇಸ್‌ ಪ್ರಿಯರಿಗೆ ಥ್ರಿಲ್ ನೀಡಿದೆ. ಕಾರು ಚಾಲಕರಿಗೆ ಎಂದಿನಂತೆ ರೋಚಕ ಅನುಭವಕ್ಕೆ ಕಾರಣವಾಗಿದೆ.
ವೇಗವೆಂದರೆ ಯಾರಿಗೆ ಇಷ್ಟ ಇಲ್ಲ? ಅದರಲ್ಲೂ ರಿವರ್ಸ್ ಕಾರನ್ನು ವೇಗವಾಗಿ ಚಲಾಯಿಸಬೇಕು ಎನ್ನುವ ತುಡಿತ ಯಾರಿಗಿಲ್ಲ? ಶರವೇಗದ ಮೋಜು, ಮಸ್ತಿಯಲ್ಲಿರುವ ಖುಷಿಯೇ ಬೇರೆ. ವೇಗವಾಗಿ ಕಾರು ಚಲಾಯಿಸುವ ಶೈಲಿಯನ್ನು ಕಣ್ತುಂಬಿಕೊಳ್ಳುವುದರಲ್ಲಿಯೂ ಮಜಾ ನೀಡಿತ್ತು

ರೇಸ್‌ ಚಾಲಕರು ಕೂಡ ಶರವೇಗವನ್ನೇ ಬದುಕಿನ ಗುರಿ ಆಗಿಸಿಕೊಂಡಿದ್ದಾರೆ. ಅವರ ಸಾಹಸ ಕೇಳಿದರೆ ಯಾರ ಮೈಯಾದರೂ ಜುಂ ಎನ್ನಬೇಕು.

ಇಂಥದ್ದೊಂದು ರೋಮಾಂಚನಕ್ಕೆ ಕಾರಣವಾಗಿದ್ದು ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಬಣಕಲ್ ಪ್ರೌಢ ಶಾಲಾ ಮೈದಾನದಲ್ಲಿ ನಡೆದ ರಿವರ್ಸ್ ರೇಸ್‌ನಲ್ಲಿ ಚಾಲಕರು ಅದ್ಭುತ ಚಾಲನಾ ಕೌಶಲ ಮೆರೆದರು. ಕಾರುಗಳು ರೊಂಯ್‌… ರೊಂಯ್‌… ಎಂದು ಸದ್ದು ಮಾಡುತ್ತಾ ದೂಳೆಬ್ಬಿಸುತ್ತಾ ಸಾಗುತ್ತಿದ್ದರೆ, ರೇಸ್‌ಪ್ರಿಯರು ಆ ದೂಳನ್ನು ಲೆಕ್ಕಿಸದೆ ಚಪ್ಪಾಳೆ, ಕೇಕೆಯ ಮೂಲಕ ಸಂಭ್ರಮಿಸುತ್ತಿದ್ದರು. ಭಾನುವಾರವಾಗಿದ್ದರಿಂದ ಮಕ್ಕಳು, ಯುವಕ ಯುವತಿಯರು, ಹಿರಿಯರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು.

Sahifa Theme License is not validated, Go to the theme options page to validate the license, You need a single license for each domain name.