ಮೃತ ಪಟ್ಟ ಹಸುವಿನ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಬಣಕಲ್ ಯುವಕರು

ಇಂದಿನ ದಿನಗಳಲ್ಲಿ ಮಾನವೀಯತೆ ,ಮನುಷ್ಯ ಧರ್ಮವನ್ನೇ ಮರೆತಿರುವಾಗ ಹಸುವೊಂದು ವಿಷಕಾರಿ ವಸ್ತುವನ್ನು ತಿಂದು ಅಸ್ವಸ್ಥವಾಗಿ ಸಾವು ಕಂಡಾಗ ಆ ಹಸುವನ್ನು ವಿಶೇಷ ರೀತಿಯಲ್ಲಿ ಪೂಜಿಸಿ ಬಣಕಲ್ ಯುವಕರ ಪಡೆಯೊಂದು ಅಂತ್ಯ ಸಂಸ್ಕಾರ ನಡೆಸಿದ ಘಟನೆ ಬಣಕಲ್ ನಲ್ಲಿ ನಡೆದಿದೆ.

ಬಣಕಲ್ ನ ಸರ್ವಿಸ್ ಸ್ಟೇಷನ್ ಬೀದಿಯಲ್ಲಿ ಮೇಯುವ ಹಸುವೊಂದು ಇದ್ದಕ್ಕಿದ್ದಂತೆ ರಸ್ತೆಯಲ್ಲಿಬೆಳಗಿನ ಜಾವಾ ಅಸ್ವಸ್ಥವಾಗಿ ಅಲ್ಲಿಯೇ ಕುಸಿದು ಬಿದ್ದು ಪ್ರಾಣ ಬಿಟ್ಟಿದೆ . ಇದನ್ನು ಗಮನಿಸಿದ ಬಣಕಲ್ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಅರುಣ್ ಪೂಜಾರಿ. ಬಣಕಲ್ ವಿಪತ್ತು ನಿರ್ವಹಣಾ ಹಾಗೂ ಮೂಡಿಗೆರೆ ಕಸಬ ವಲಯದ ರವಿಪೂಜಾರಿ. ಬಣಕಲ್ ಬಜರಂಗದಳ ಹೋಬಳಿ ಸಂಚಾಲಕ ಅಭಿ. ನಗರ ಸಂಚಾಲಕ ಪ್ರದೀಪ್ ರವರು ಸ್ಥಳಕ್ಕೆ ಆಗಮಿಸಿ ಸಾವನ್ನಪ್ಪಿದ ಹಸುವಿನ ಅಂತ್ಯಸಂಸ್ಕಾರವನ್ನು ಮಾಡಿದ್ದಾರೆ.
ಸಾವು ಕಂಡ ಜಾಗದಲ್ಲಿ ಹಸುವಿಗೆ ಪೂಜೆ ಸಲ್ಲಿಸಿ ಅದನ್ನು ನಗರದ ಬೇರೆಡೆಗೆ ಟ್ರಾಕ್ಟರ್ ಮುಖಾಂತರ ಕೊಂಡೊಯ್ದು ಜೇಸಿಬಿ ಮುಖಾಂತರ ಗುಂಡಿ ತೆಗೆದು ವಿಧಿ ವಿಧಾನದ ಮೂಲಕ ಸಂಸ್ಕಾರ ಮಾಡಿ ಮಾನವೀಯತೆ ತೋರಿದ್ದಾರೆ.

Sahifa Theme License is not validated, Go to the theme options page to validate the license, You need a single license for each domain name.